Breaking News

ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿವೆ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ‌ ಯೋಜನೆಗಳು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಸೊರಬದ ಬ್ಲಾಕ್ ವ್ಯಾಪ್ತಿಯ ವಿವಿಧ ಇಲಾಖೆಗಳ 25 ಕಾಮಗಾರಿಗಳು ಮತ್ತು 58 ಕಾಮಗಾರಿಗಳ‌ ಶಂಕುಸ್ಥಾಪನೆ (ಒಟ್ಟು 56.34ಕೋಟಿ ಮೊತ್ತದ) ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಕಚೇರಿ , ತಾಲ್ಲೂಕು ಬಗರ್ ಹುಕುಂ ಸಮಿತಿ‌ ಕಚೇರಿ ಹಾಗೂ ಸೊರಬ ಪ್ರಥಮ‌ ದರ್ಜೆ ಕಾಲೇಜಿನ ಹೊಸ ಕಟ್ಟಡ ಕಾಮಗಾರಿ‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕತೆ ರೂಪದಲ್ಲಿ, ಆಹಾರವಾಗಿ, ಬಡವರ ಮನೆಗಳ ಜ್ಯೋತಿಯಾಗಿ ಬೆಳಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಲ್ಲ. ಬದಲಾಗಿ ಅದು ಅಕ್ಷಯ ಪಾತ್ರೆ. ಗೃಹಜ್ಯೋತಿಯಡಿ ಉಚಿತ ವಿದ್ಯುತ್, ಗೃಹಲಕ್ಷ್ಮಿ‌ಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ.2000 , ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಯುವನಿಧಿ ಯೋಜನೆಯಡಿ 17 ಲಕ್ಷ ವಿದ್ಯಾರ್ಥಿಗಳು ಸೌಲಭ್ಯ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲು ಹಣವನ್ನು ಸಂದಾಯ ಮಾಡಲಾಗುತ್ತಿದ್ದು ರಾಜ್ಯದ ಬಡ ಜನತೆಯ ಏಳ್ಗೆಗೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ ಎಂದರು.
ಶಂಕುಸ್ಥಾಪನೆಯಾದ ಕಾಮಗಾರಿಗಳ ಕೆಲಸವನ್ನು ನಾಳೆಯಿಂದನೇ ಆರಂಭಿಸಬೇಕು. ಗುಣಮಟ್ಟದ ಕಾಮಗಾರಿಗಳು ಆಗಬೇಕು. ಎಲ್ಲ ಗ್ರಾಮಗಳಿಗೆ ನಾನೇ ವೈಯಕ್ತಿಕ ವಾಗಿ ಭೇಟಿ ನೀಡುತ್ತೇನೆ.
ಸೊರಬ ತಾಲ್ಲೂಕಿನಲ್ಲಿ ಮುಂದಿನ ಜನವರಿ ಒಳಗೆ ರೂ. 200 ಕೋಟಿ ಮೊತ್ತದಲ್ಲಿ ಸುಮಾರು 179 ಕಾಮಗಾರಿ‌ಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಮಾಜಿ‌ ಮುಖ್ಯಮಂತ್ರಿಗಳಾದ ಬಂಗಾರಪ್ಪನವರು ಜಾರಿ ಮಾಡಿದ ಪಂಪ್ ಸೆಟ್ ವಿತರಣೆ ಯೋಜನೆಯಡಿ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.‌ ಪ್ರಸ್ತುತ ಸರ್ಕಾರ ಪ್ರತಿ ಗ್ರಾ.ಪಂ ಗೆ ಅಭಿವೃದ್ದಿ ಕೆಲಸಗಳಿಗೆ ರೂ. 8 ರಿಂದ 9 ಕೋಟಿ ಹಣ ನೀಡುತ್ತಿದೆ. ಸೊರಬದಲ್ಲಿ ಶೀಘ್ರದಲ್ಲೇ ಜೆಜೆಎಂ‌ ಯೋಜನೆಯಡಿ ಶರಾವತಿ‌ ನದಿಯಿಂದ 24 ತಾಸು ಕುಡಿಯುವ ನೀರು ಒದಗಿಸಲಾಗುವುದು. 960 ಕೋಟಿ ಕೆರೆ ತುಂಬಿಸುವ ಯೋಜನೆಯನ್ನೂ ಶೀಘ್ರದಲ್ಲೇ ಅನುಷ್ಟಾನಗೊಳಿಸಲಾಗುವುದು. ಜಿಲ್ಲೆಯಲ್ಲಿ‌ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ದಿ‌ ನಿಗಮದ ಅಧ್ಯಕ್ಷ ರವಿಕಯಮಾರ್ ‌ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಅನೇಕ ಯೋಜನೆಗಳು‌ ಮತ್ತು ಕಾರ್ಯಕ್ರಮಗಳ‌ ಮೂಲಕ ವಿದ್ಯಾರ್ಥಿಗಳು, ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮಿ‌ಯೋಜನೆಯಡಿ ರೂ.7.60 ಕೋಟಿ ಪ್ರತಿ ತಿಂಗಳು ಸಂದಾಯವಾಗುತ್ತಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯು ಶೇ.85 ಸಾಧನೆ ಮಾಡಲಾಗಿದ್ದು, ಶೇ.100 ಸಾಧನೆ ಮಾಡಲಾಗುವುದು ಎಂದರು.

Share News

About bigtvnews22

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *