Breaking News

ದರ್ಪ ತೋರಿದವನಿಗೆ ದಂಡದ ಬಿಸಿ!

ಚಿಂತಾಮಣಿ: ನಗರದ ರಾಷ್ಟ್ರೀಯ ಹೆದ್ದಾರಿಯ ಕಾಂಪ್ಲೆಕ್ಸ್​ ಬಳಿ ಸೋಮವಾರ ನಗರಠಾಣೆ ಪೊಲೀಸರು ದ್ವಿಚಕ್ರವಾಹನಗಳ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾಗ ದಾಖಲಾತಿ ಹಾಜರುಪಡಿಸದೆ ದರ್ಪ ಪ್ರದರ್ಶಿಸಿದ ಬೈಕ್​ ಸವಾರನಿಗೆ ಒಂದು ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ. ಮಹಿಳಾ ಪಿಎಸ್​ಐ ಪದ್ಮಾ ನೇತೃತ್ವದ ತಂಡ ವಾಹನಗಳ ದಾಖಲೆಗಳ ಜತೆಗೆ ಹೆಲ್ಮೆಟ್​ ಧರಿಸದ ಸವಾರರನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಬೈಕ್​ ಚಾಲನೆ ಮಾಡಿಕೊಂಡು ಬಂದವನನ್ನು ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ್ದ. ಕರ್ತವ್ಯನಿರತ ಮಹಿಳಾ ಪೊಲೀಸ್​ ಪೇದೆ, ಎಎಸ್​ಐ ಮತ್ತು ಪುರುಷ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಯಾರನ್ನೂ ಲೆಕ್ಕಿಸದೆ ಏರುಧ್ವನಿಯಲ್ಲಿ ನಿಂದಿಸಿ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೈಕ್​ ಏರಿ ಹೊರಡಲು ಮುಂದಾಗಿದ್ದ. ಈ ವೇಳೆ ಆತನನನ್ನು ಹಿಡಿದು ಗೂಡ್ಸ್​ ವಾಹನದ ಮೂಲಕ ನಗರಠಾಣೆಗೆ ಕಳುಹಿಸಿಕೊಟ್ಟರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬೈಕ್​ ಸವಾರ ಸಾವಿರಾರು ರೂ. ದಂಡ ಕಟ್ಟಿ ವಾಹನ ಪಡೆದುಕೊಂಡು ತೆರಳಿದನು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *