Breaking News
Oplus_131072

ಹೆಂಡತಿಯನ್ನು ಕೊಂದು ಚರಂಡಿಗೆ ಎಸೆದ ಗಂಡ!!

ದೆಹಲಿಯ ಉದ್ಯಮಿಯೊಬ್ಬ ಬಹಳ ಪ್ಲಾನ್ ಮಾಡಿ ತನ್ನ ಹೆಂಡತಿಯನ್ನು ಕೊಂದಿದ್ದ. ಯಾರಿಗೂ ಗೊತ್ತಾಗಬಾರದೆಂದು ಮುನ್ನೆಚ್ಚರಿಕಾ ಕ್ರಮವನ್ನು ಕೂಡ ತೆಗೆದುಕೊಂಡಿದ್ದ.ಆತ ತನ್ನ ಹೆಂಡತಿಯನ್ನು ಕೊಂದಿದ್ದ. ತಮ್ಮ ಮಗಳೆಲ್ಲಿ ಎಂದು ಆಕೆಯ ಪೋಷಕರು ಕೇಳಿದಾಗ ಮಾತು ಮರೆಸುತ್ತಿದ್ದ. ಇದರಿಂದ ಅವರಿಗೆ ಅನುಮಾನ ಮೂಡಿತ್ತು. ಪೊಲೀಸರು ಅವರನ್ನು ಸಂಪರ್ಕಿಸಿ ನಿಮ್ಮ ಮಗಳ ಶವ ಪತ್ತೆಯಾಗಿದೆ ಎಂದು ಹೇಳುವವರೆಗೂ ಆ ಕುಟುಂಬಕ್ಕೆ ತಮ್ಮ ಮಗಳು ಬದುಕಿಲ್ಲವೆಂಬ ವಿಷಯವೇ ಗೊತ್ತಿರಲಿಲ್ಲ.ವಿಚಾರಿಸಿದಾಗ ತಾವು ತಮ್ಮ ಮಗಳೊಂದಿಗೆ ಒಂದು ತಿಂಗಳಿನಿಂದ ಮಾತನಾಡಿಲ್ಲ. ಆಕೆ ಹೇಗಿದ್ದಾಳೋ ಗೊತ್ತಿಲ್ಲ ಎಂದರು. ಅಳಿಯ ಅನಿಲ್ ಕುಮಾರ್ ಆಕೆ ಜೈಪುರಕ್ಕೆ ಹೋಗಿದ್ದಾಳೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಇದರಿಂದ ಪೊಲೀಸರು ಅನುಮಾನ ಬಲವಾಗಿ, ಅನಿಲ್ ಕುಮಾರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ತಾನೇ ಹೆಂಡತಿಯ ಕತ್ತು ಹಿಸುಕಿ ಕೊಂದಿದ್ದಾಗಿ ಅನಿಲ್ ಒಪ್ಪಿಕೊಂಡಿದ್ದಾನೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *