Breaking News

ಸಿಎಂ ಸಿದ್ದರಾಮಯ್ಯರಿಂದ ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ ಕೃತಿಯ ಆವೃತ್ತಿ ಬಿಡುಗಡೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರಆಧುನಿಕ ಮಾಧ್ಯಮ, ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ ಕೃತಿಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಕಾವೇರಿ ನಿವಾಸದಲ್ಲಿ ಬಿಡುಗಡೆ ಮಾಡಿದರು.
ಸ್ವಾತಂತ್ರ್ಯ ಸಂದರ್ಭದಿಂದ ಈ ಕ್ಷಣದವರೆಗೆ ದೇಶದಲ್ಲಿ ನಡೆದ ಚುನಾವಣೆಗಳು, ಚುನಾವಣಾ ರಾಜಕಾರಣ ಕುರಿತಂತೆ ಮಾಧ್ಯಮಗಳು ಕಾಲ ಕಾಲಕ್ಕೆ ಬದಲಾಗಿರುವುದು, ಚುನಾವಣಾ ಸ್ವರೂಪದಲ್ಲಿ ಆದ ಮಾರ್ಪಾಡುಗಳು, ಇವೆಲ್ಲದರಿಂದ ದೇಶದ ಪ್ರಜಾಪ್ರಭುತ್ವದ ಮೇಲೆ ಆಗಿರುವ ಪರಿಣಾಮಗಳ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ. ರಾಜಕೀಯ ಸಂವಹನ ಕ್ಷೇತ್ರದ ಆಳವಾದ ಅಧ್ಯಯನದಿಂದ ಬಂದಿರುವ ಅಪರೂಪದ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ. ಕೃತಿ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು, ಕೃತಿ ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲಿ ವಿಶ್ಲೇಷಣೆಗೆ ಒಳಗಾಗಿರುವುದರಿಂದ ರಾಜಕೀಯ ವಿಜ್ಞಾನ ಮತ್ತು ಮಾಧ್ಯಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗುತ್ತದೆ ಎಂದರು.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *