Breaking News
Featured Video Play Icon

ಹೊಸ ವರ್ಷಾಚರಣೆ: ಆರೋಪಿಗಳು ಒಳ್ಳೆಯ ಜವಾಬ್ದಾರಿಯುತ ನಾಗರಿಕರಾಗಿ; ಕಮಿಷನರ್ ಎನ್. ಶಶಿಕುಮಾರ್.

ಕ್ರೈಂ ನಿಂದ ಜೀವನ ಖುಷ್ ಇರಲ್ಲ.. ಸಜ್ಜನಿಕೆಯಿಂದ ಬಾಳಿ

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಾಧ್ಯಮ ಮಿತ್ರರಿಗೆ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತದಿಂದ ಹೊಸ ವರ್ಷದ ಶುಭಾಶಯ ತಿಳಿಸಿದ ಕಮಿಷನರ್ ಎನ್.ಶಶಿಕುಮಾರ್….ಹುಬ್ಬಳ್ಳಿ: ಹೊಸ ವರ್ಷದ ಹಿನ್ನಲೆಯಲ್ಲಿ ಡ್ರಗ್ ಪೆಡ್ಲರ್ಸ್, ರೌಡಿ ಶಿಟರ್ ಗಳ ಬಗ್ಗೆ ಪರೇಡ್ ನಡೆಸಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರಿಗೆ ಎಚ್ಚರಿಕೆ ನೀಡಲಾಗಿದ್ದು, ಸುಮಾರು 2000 ಸಿಬ್ಬಂದಿಗಳ ಸುಸಜ್ಜಿತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಇನ್ನು ನಗರದ ಹೊಟೇಲ್‌, ರೆಸ್ಟೋರೆಂಟ್, ರೆಸಾರ್ಟ್ಸ್ ಗಳು ನಿಯಮಗಳನ್ನು ಪಾಲನೆ ಮಾಡಬೇಕು ಇಲ್ಲದಿದ್ದರೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.ನಗರದಲ್ಲಿ ಚಾಕು ಇರಿತದ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡುತ್ತವೆ. ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ. 4 ಪ್ರತ್ಯೇಕ ಪ್ರಕರಣಗಳಲ್ಲಿ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ಕೊಲೆ ಪ್ರಕರಣ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ಅಧಿಕಾರಿ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಚಾಕು, ಚೂರಿ ಇಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದರಿಂದ ಯಾರು ದೊಡ್ಡವರಾಗಲ್ಲ, ಅದರ ಬದಲು ಯಾರು ಯುವ ಜನತೆ ಆರೋಪಿಗಳು ಇದಾರೆ ಅವರು ಕಷ್ಟಪಟ್ಟು ದುಡಿದು ತಂದೆ-ತಾಯಿ, ಕುಟುಂಬದವರಿಗೆ ಸ್ಪಂದಿಸಿ. ಚಾಕು, ಚೂರಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡಿದರೇ ಅವನು ಯಾವತ್ತು ಹಿರೋ ಆಗಲ್ಲ ವಿಲನ್ ನೆ ಆಗ್ತಾನೆ ಇದನ್ನು ಸಮಾಜ, ಸಮುದಾಯವು ಒಪ್ಪಲ್ಲ ಒಳ್ಳೆಯ ರೀತಿಯಲ್ಲಿ ಇರಲು ಪ್ರಯತ್ನಿಸಿ. ಈ 4 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಶೋಕಿಯಿಂದ ಜೈಲು ಪಾಲಾಗಿರುವುದನ್ನು ಗಮನಿಸಬಹುದು, ಒಳ್ಳೆಯ ಜವಾಬ್ದಾರಿಯುತ ನಾಗರಿಕರಾಗಲು ಪ್ರಯತ್ನ ಮಾಡಬೇಕು ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Share News

About Shaikh BigTv

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *