ಹೊಸದಿಲ್ಲಿ: ಭಾರತದಲ್ಲಿ ಮೂರನೇ ಅಲೆ ಮುಕ್ತಾಯವಾಗಿರುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಕಳೆದ 22 ತಿಂಗಳಲ್ಲೇ ಕನಿಷ್ಠ ಸಾಪ್ತಾಹಿಕ ಪ್ರಕರಣಗಳು ಕಳೆದ ವಾರ ದೇಶದಲ್ಲಿ ವರದಿಯಾಗಿವೆ.
2020ರ ಮೇ ತಿಂಗಳ ಬಳಿಕ ಇಷ್ಟೊಂದು ಕಡಿಮೆ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು.
ಕಳೆದ ನಾಲ್ಕು ವಾರಗಳಲ್ಲಿ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ವಾರ ಅರ್ಧದಷ್ಟು ಕಡಿಮೆಯಾಗಿದೆ. ಫೆಬ್ರವರಿ 21-27ರ ಅವಧಿಯಲ್ಲಿ ದೇಶದಲ್ಲಿ 86097 ಪ್ರಕರಣಗಳು ವರದಿಯಾಗಿದ್ದವು. ಅದಕ್ಕೂ ಹಿಂದಿನ ಮೂರು ವಾರಗಳಲ್ಲಿ ಅನುಕ್ರಮವಾಗಿ 1.7 ಲಕ್ಷ, 3.9 ಲಕ್ಷ ಮತ್ತು 9.7 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಇದು ಸಾಂಕ್ರಾಮಿಕ ಆರಂಭವಾದ ಬಳಿಕ ಅತಿ ವೇಗದ ಇಳಿಕೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

