Breaking News

ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಂಸದ ಚಾಮರಾಜ್ ಒಡೆಯರ್: ಮೈಸೂರು ಹಾಗೂ ಕೊಡಗು ಅಭಿವೃದ್ದಿಯ ಬಗ್ಗೆ ಚರ್ಚೆ

ಬೆಂಗಳೂರು : ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನವರನ್ನು ಸಂಸದ ಯದುವೀರ್ ಕೃಷ್ಣ ಚಾಮರಾಜ ಒಡೆಯರ್ ಅವರು ಭೇಟಿಯಾಗಿದ್ದು, ಹೂಗುಚ್ಛ ನೀಡಿ ಗೌರವಿಸಲಾಯಿತು.
ಈ ವೇಳೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಉಪಸ್ಥಿತರಿದ್ದರು.
ಬಳಿಕ ಮೈಸೂರು ಹಾಗೂ ಕೊಡಗು ಅಭಿವೃದ್ದಿಯ ಬಗ್ಗೆ ಕೆಲ ಕಾಲ ಮಾತನಾಡಿದ್ದಾರೆ. ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೆ ನಿಮಾನ್ಸ್ ಆಸ್ಪತ್ರೆಯ ಮಹೋತ್ಸವದಂದು ಬಿಜೆಪಿ ಕೆಲ ನಾಯಕರು ಹಾಗೂ ಕಾಂಗ್ರೆಸ್ ನ ನಾಯಕರು ಒಟ್ಟಾಗಿದ್ದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *