Breaking News

ಕಡಿಮೆಯಾದ ತೊಗರಿ ಬೆಲೆ: ರೈತರು ಕಂಗಾಲು

ಬಾಗಲಕೋಟೆ: ಬೆಂಬಲ ಬೆಲೆಯಡಿ ತೊಗರಿಕಾಳು ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸದ್ದರಿಂದ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರವು ₹7,550 ಬೆಂಬಲ ಘೋಷಿಸಿದ್ದು, ಅದಕ್ಕಿಂತಲೂ ಕಡಿಮೆ ಬೆಲೆಗೆ ಎಪಿಎಂಸಿಯಲ್ಲಿ ಮಾರಾಟವಾಗುತ್ತಿದೆ.
ಜಿಲ್ಲೆಯಲ್ಲಿ 73,301 ಹೆಕ್ಟೇರ್ ಪ್ರದೇಶದಲ್ಲಿ ತೊಗರಿಕಾಳು ಬೆಳೆಯಲಾಗಿದೆ.
7,33,013 ಮೆಟ್ರಿಕ್‌ ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ಡಿಸೆಂಬರ್ ಆರಂಭದಿಂದಲೇ ತೊಗರಿಕಾಳು ಮಾರುಕಟ್ಟೆಗೆ ಬರಲಾರಂಭಿಸಿದೆ. ಬಾಗಲಕೋಟೆ ಎಪಿಎಂಸಿಯಲ್ಲಿ 30 ಸಾವಿರ ಕ್ವಿಂಟಲ್‌ನಷ್ಟು ಮಾರಾಟವಾಗಿದೆ. ಹೊರಗಡೆ ಮಾರುಕಟ್ಟೆಯಲ್ಲಿಯೂ ಸಾಕಷ್ಟು ಮಾರಾಟವಾಗಿದೆ.
ಪ್ರತಿ ಕ್ವಿಂಟಲ್‌ಗೆ ₹2 ಸಾವಿರದಿಂದ ₹7,929ಕ್ಕೆ ಬುಧವಾರ ಮಾರಾಟವಾಗಿದೆ. ಸರಾಸರಿ ಬೆಲೆಯು ಬೆಂಬಲ ಬೆಲೆಗಿಂತ ಕಡಿಮೆ ಇದ್ದು, ₹7,119 ಇದೆ. ಆರಂಭದಲ್ಲಿ ₹10 ಸಾವಿರದಷ್ಟಿದ್ದ ಬೆಲೆ ಕಡಿಮೆಯಾಗಿದೆ. ಕೆಲವೊಮ್ಮೆ ಇದಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆಯಡಿ ಖರೀದಿ ಮಾಡಿದರೆ, ರೈತರಿಗೆ ಹೆಚ್ಚಿನ ಮೊತ್ತ ದೊರೆಯಲಿದೆ.
ಕೇಂದ್ರ ಸರ್ಕಾರ ಈಗಾಗಲೇ 3.06 ಲಕ್ಷ ಟನ್‌ ತೊಗರಿಕಾಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಅನುಮತಿ ನೀಡಿದೆ. ಜಿಲ್ಲೆಯಲ್ಲಿಯೂ ಈಗಾಗಲೇ ಟಾಸ್ಕ್‌ ಫೋರ್ಸ್ ಸಮಿತಿ ಸಭೆ ಮಾಡಲಾಗಿದ್ದು, ಜಿಲ್ಲೆಯ 18 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಹುಳುಗಳ ಕಾಟ: ತೊಗರಿಕಾಳನ್ನು ಸಂಗ್ರಹಿಸಿಡಲು ರೈತರು ಸೂಕ್ತ ವ್ಯವಸ್ಥೆಯಿಲ್ಲ. ಮನೆಯಲ್ಲಿಯೇ ಇಟ್ಟರೆ, ಬುರಬುರಿ (ಹುಳುಗಳ) ಹತ್ತುತ್ತವೆ. ಇದರಿಂದಾಗಿ ತೊಗರಿಕಾಳು ತೂತು ಬಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ. ತೊಗರಿ ಬೀಜ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ರೈತರು ಸಾಲ, ಉದ್ರಿ ಪಡೆದುಕೊಂಡಿರುತ್ತಾರೆ. ಬೆಳೆ ಬಂದ ತಕ್ಷಣ ಅದನ್ನು ಮರಳಿ ಕೊಡುವುದಾಗಿ ಅವರಿಗೆ ಹೇಳಿರುತ್ತಾರೆ. ರಾಶಿಯಾಗುತ್ತಿದ್ದಂತೆಯೇ ಸಾಲ ನೀಡಿದವರು ಹಣ ಕೇಳಲು ಆರಂಭಿಸುತ್ತಾರೆ. ಈ ಕಾರಣಗಳಿಂದ ರೈತರು ರಾಶಿಯಾಗುತ್ತಿದ್ದಂತೆಯೇ ಮಾರಾಟ ಮಾಡಿ ಬಿಡುತ್ತಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *