ಹುಬ್ಬಳ್ಳಿ: ಕುಸಗುಲ್ ನಲ್ಲಿ ಹೆತ್ತ ಮಗನಿಂದಲೇ ತಂದೆ,ಮಲತಾಯಿ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು

ಧಾರವಾಡ ಎಸ್ ಪಿ ಗೋಪಾಲ್ ಬ್ಯಾಕೋಡ್ ಹೇಳಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆಸ್ತಿ ವಿಚಾರವಾಗಿ ಹೆತ್ತ ತಂದೆ ಹಾಗೂ ಮಲತಾಯಿ ಕೊಲೆ ಮಾಡಿದ ಘಟನೆ ನಡೆದಿದೆ. ಕಬ್ಬಿಣದ ರಾಡ್ ನಿಂದ ಹೊಡೆದುಕೊಲೆ ಮಾಡಲಾಗಿದೆ. ಆಶೋಕ ( 58) ಶಾರದಾ (45) ಕೊಲೆಯಾಗಿದೆ.

ಅಶೋಕ ಮಗ ಗಂಗಾಧರಪ್ಪ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆಸ್ತಿ ಕಲಹದ ಹಿನ್ನಲೆ ಕೊಲೆಯಾಗಿದೆ ಎಂದರು.ಕಳೆದ ಕೆಲ ವರ್ಷಗಳಿಂದ ಗಲಾಟೆ ಇತ್ತು. ಅಶೋಕ ಗೆ ಇಬ್ಬರು ಹೆಂಡತಿಯರು. ಅಶೋಕ ಮೊದಲ ಹೆಂಡತಿ ಹತ್ತು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಮೊದಲ ಹೆಂಡತಿ ಶಾಂತಮ್ಮ ಸಾವನ್ನಪ್ಪಿದ್ದಾಳೆ. ಎರಡನೇ ಹೆಂಡತಿ ಶಾರದಾ. ದಂಪತಿಯನ್ನು ಮಗ ಗಂಗಾಧರಪ್ಪ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದ ಎಸ್ ಪಿ ಮಾಹಿತಿ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

