Breaking News

ಕೆಲಸಕ್ಕಿದ್ದ ಮನೆಯಲ್ಲೇ 42.89 ಲಕ್ಷ ರೂ. ಮೌಲ್ಯದ ಚಿನ್ನ ಕದ್ದ ದಂಪತಿ ಬಂಧನ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ದಂಪತಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಐಶ್ವರ್ಯ (22) ಮತ್ತು ಈಕೆಯ ಪತಿ ಮಣಿಕಂಠ (26) ಬಂಧಿತರು. ‌ 42.89 ಲಕ್ಷ ರೂ. ಮೌಲ್ಯದ 199 ಗ್ರಾಂ ಚಿನ್ನಾಭರಣ ಮತ್ತು 730 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆಪಡೆಯಲಾಗಿದೆ. ಆರೋಪಿಗಳು ಉದ್ಯಮಿ, ಗುತ್ತಿಗೆದಾರ ಮಲ್ಲಿಕಾರ್ಜುನ್‌ ನಾಯ್ಡು ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದರು. 5 ತಿಂಗಳ ಹಿಂದಷ್ಟೇ ದಂಪತಿ ಮಲ್ಲಿಕಾರ್ಜುನ್‌ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ದಂಪತಿಗೆ ಮನೆಯ ಹಿಂಭಾಗದಲ್ಲಿರುವ ಔಟ್‌ಹಾಸ್‌ನಲ್ಲಿ ವಾಸವಿರಲು ಸ್ಥಳ ನೀಡಲಾಗಿತ್ತು. ಆದರೆ, ಆರೋಪಿಗಳು ಮಾಲಿಕರ ನಂಬಿಕೆ ಗಳಿಸಿ ಚಿನ್ನಾಭರಣ ಕಳವು ಮಾಡಿದ್ದರು. ಏ.15ರಂದು ಒಡವೆಗಳು ನಾಪತ್ತೆಯಾದಾಗ ಅನುಮಾನಗೊಂಡ ಮಾಲಿಕ ಮಲ್ಲಿಕಾರ್ಜುನ್‌ ನಾಯ್ಡು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಮನೆಗೆಲಸದ ದಂಪತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾ ಸತ್ಯಾಂಶ ಬಯಲಾಗಿದೆ ಎಂದು ಪೊಲೀಸರು ಹೇಳಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *