Breaking News

ಬಡತನ ನಿರ್ಮೂಲನೆ ಅಭಿವೃದ್ದಿಗೆ ಸ್ವಾಮಿತ್ವ ಯೋಜನೆ ನೆರವು: ಪ್ರಧಾನಿ ಮೋದಿ

ನವದೆಹಲಿ: ಗ್ರಾಮೀಣ ಪ್ರದೇಶದ ಜನರಿಗೆ ಆಸ್ತಿ ಹಕ್ಕು ದೃಢಪಡಿಸುವ “ಸ್ವಾಮಿತ್ವ’ ಯೋಜನೆ ಆಸ್ತಿ ಸಂಬಂಧಿ ವ್ಯಾಜ್ಯ ಬಗೆಹರಿಸುವ ಮೂಲಕ ಬಡತನ ನಿರ್ಮೂಲನೆ, ಅಭಿವೃದ್ಧಿಗೆ ಸಹಕಾರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶನಿವಾರ ಯೋಜನೆ ಅನ್ವಯ ಸುಮಾರು 65 ಲಕ್ಷ ಆಸ್ತಿ ಕಾರ್ಡ್‌ಗಳನ್ನು ವರ್ಚುವಲ್‌ ಆಗಿ ಮೋದಿ ಫ‌ಲಾನುಭವಿಗಳಿಗೆ ವಿತರಿಸಿದ್ದಾರೆ.
10 ರಾಜ್ಯಗಳ ಫ‌ಲಾನುಭವಿಗಳಿಗೆ ಕಾರ್ಡ್‌ ವಿತರಿಸಿದ್ದು, ಈ ಮೂಲಕ ಫ‌ಲಾನುಭವಿಗಳ ಒಟ್ಟು ಸಂಖ್ಯೆ 2.24 ಕೋಟಿ ಆಗಿದೆ.
2020ರಲಿ ಮೋದಿ ಸ್ವಾಮಿತ್ವ (ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಮೂಲಕ ಗ್ರಾಮ ಸಮೀಕ್ಷೆ, ಮ್ಯಾಪಿಂಗ್‌) ಯೋಜನೆ ಆರಂಭಿಸಿದ್ದರು. ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ತಮ್ಮ ಆಸ್ತಿ ಮಾಲಕತ್ವದ ಹಕ್ಕು ಹೊಂದುವ ಆಸ್ತಿ ಕಾರ್ಡ್‌ ವಿತರಿಸಲಾಗುತ್ತದೆ. ಸರಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಕಾರ್ಡ್‌ ಸಹಾಯ ಮಾಡುತ್ತದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *