Breaking News

ಕಾಶ್ಮೀರ್ ಪ್ರತಿ ನಗರ ನಗರದಲ್ಲೂ ಹುಟ್ಟಿಕೊಳ್ಳುತ್ತಿವೆ‌: ಪ್ರಮೋದ್ ಮುತಾಲಿಕ್


ಧಾರವಾಡ: ದೇಶದಲ್ಲಿ ಒಂದೇ ಕಾಶ್ಮೀರ್ ಇಲ್ಲ . ಅಂತಹ ಕಾಶ್ಮೀರ್ ಪ್ರತಿ ನಗರ ನಗರದಲ್ಲೂ ಹುಟ್ಟಿಕೊಳ್ಳುತ್ತಿವೆ . ಹೀಗಾಗಿ ಹಿಂದೂಗಳು ಜಾಗೃತಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಹೇಳಿದರು.

ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆ ಮಾಡಿ ನಂತರ ಮಾತಾನಾಡಿ , ಕಾಶೀರ್‌ದಲ್ಲಿ ಮಾತ್ರ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿಲ್ಲ . ಪ್ರತಿ ನಗರಗಳಲ್ಲೂ ಒಂದು ಕೋಮಿನ ಜನಸಂಖ್ಯೆ ಹೆಚ್ಚಾದಂತೆ ದೌರ್ಜನ್ಯ ನಡೆಯುತ್ತಿದೆ . ಹೀಗಾಗಿ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದರು.ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಇಂತಹ ಭಯಾನಕ ಸತ್ಯ ಬಿಚ್ಚಿಟ್ಟು ಜನರನ್ನು ಜಾಗೃತಗೊಳಿಸಿದೆ . ಎಲ್ಲರಿಗೂ ಇದು ಅರ್ಥವಾಗಬೇಕು , ಜಾತಿ , ಮತ , ಪಂಥ , ಪಕ್ಷ ಮರೆತು ಕೇವಲ ಹಿಂದೂವಾಗಿ ಹೋರಾಡಬೇಕು . ಪ್ರತಿಯೊಬ್ಬ ಹಿಂದೂ ಜಾಗೃತರಾಗಿರಬೇಕು ಕರಾಳ ಕೃತ್ಯನಿರಂತರವಾಗಿ ಮುಂದುವರೆದಿದೆ ಅದನ್ನು ಕೊನೆಗೊಳಿಸಲು ಸಂಘಟನಾತ್ಮಕ ಹೋರಾಟ ಅವಶ್ಯಕತೆ ಇದೆ ಎಂದರು .

Share News

About admin

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *