Breaking News

ಶೀಘ್ರವೇ 1200 ಪಿಎಸ್ಐ, 12 ಸಾವಿರ ಪೊಲೀಸರ ನೇಮಕಾತಿ: ಸಚಿವ ಪರಮೇಶ್ವರ್

ಕಲಬುರಗಿ: ರಾಜ್ಯದಲ್ಲಿ ಆರರಿಂದ ಏಳು ತಿಂಗಳಲ್ಲಿ 1200 ಪಿಎಸ್‌ಐ ಗಳ ನೇಮಕಾತಿ ಮಾಡಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, 10 ರಿಂದ 12 ಸಾವಿರ ಪೋಲಿಸ್ ಸಿಬ್ಬಂದಿಯ ಕೊರತೆ ಇದೆ. ರಾಜ್ಯದಲ್ಲಿ ಅದನ್ನು ಕೂಡ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
6-7 ತಿಂಗಳಲ್ಲಿ 1200 ಪಿಎಸ್‌ಐಗಳ ನೇಮಕಾತಿ ನಡೆಸಲಿದ್ದು, ರಾಜ್ಯದಲ್ಲಿ 10 ರಿಂದ 12 ಸಾವಿರ ಪೋಲಿಸ್ ಸಿಬ್ಬಂದಿಯ ಕೊರತೆ ಇದ್ದು, ಅವನ್ನು ಕೂಡ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತೇವೆ. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುತ್ತಾರೆ. ಅಂತಹ ಒಂದು ಉದಾರಣೆ ಕೊಡಿ ಎಂದು ಪರಮೇಶ್ವರ್ ಹೇಳಿದ್ದಾರೆ.
ಸುಮ್ಮನೆ ಜನರಲ್ ಆಗಿ ಆರೋಪಗಳನ್ನು ಮಾಡಬಾರದು. ಅವರ ಕಾಲದಲ್ಲಿ ಎಷ್ಟು ಆಗಿದೆ ಎನ್ನುವ ದಾಖಲೆ ಇದೆ. ಅದನ್ನು ಸಮಯ ಬಂದಾಗ ನಾವು ಬಿಡುಗಡೆ ಮಾಡುತ್ತೇವೆ. 48 ಗಂಟೆಗಳಲ್ಲಿ ಮಂಗಳೂರು ದರೋಡೆ ಪ್ರಕರಣ ಕೇಸ್ ಭೇಧಿಸಿದ್ದೇವೆ. ಬೀದರ್ ದರೋಡೆ ಪ್ರಕರಣ ಕೂಡ ಕೊನೆಯ ಹಂತದಲ್ಲಿದೆ. ಆದಷ್ಟು ಬೇಗ ನಮ್ಮ ಪೊಲೀಸರು ಅವರನ್ನು ಬಂಧಿಸುತ್ತಾರೆ ಎಂದು ಹೇಳಿದ್ದಾರೆ.

Share News

About BigTv News

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *