Breaking News

ಮೇಯರ್ ಗೌನ್ ಗದ್ದಲ , ಕಾಂಗ್ರೆಸ್ ಪ್ರತಿಭಟನೆ : ಸಾಮಾನ್ಯ ಸಭೆ ಹಟಾತ್ ಮುಂದೂಡಿಕೆ

ಹುಬ್ಬಳ್ಳಿ : ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯುತ್ತಿತ್ತು . ಆದ್ರೆ ಸಭೆ ಆರಂಭದಲ್ಲೇ ಮೇಯರ್ ಗೌನ್ ಗದ್ದಲ ಸೃಷ್ಟಿಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯ ಮಧ್ಯೆ ಜಟಾಪಟಿ ನಡೆದ Exclusive ವಿಡಿಯೋ ಇಲ್ಲಿದೆ …

ಹೌದು . ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಿದ್ದರು . ಆದರೆ ಮೇಯರ್ ಈರೇಶ ಅಂಚಟಗೇರಿ ಅವರು ರಾಷ್ಟ್ರಪತಿ ಅವರಿಗೆ ತಮ್ಮ ಗೌನ್ ಇಲ್ಲದೆ ಪೌರ ಸನ್ಮಾನ ಮಾಡಿದ್ದಾರೆಂದು ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು . ಗೌನ್ ಧರಿಸದ ಶಿಷ್ಟಾಚಾರಕ್ಕೆ ತಿಲಾಂಜಲಿ ಹಾಡಿರುವ ಮೇಯರ್ ಈರೇಶ ಅಂಚಟಗೇರಿ , ಸಭೆಗೆ ಆಗಮಿಸುತ್ತಿದ್ದಂತೆಯೇ ಮೇಯರ್ ವಿರುದ್ಧ ಕಾಂಗ್ರೆಸ್ ಸದಸ್ಯರು ಹರಿಹಾಯ್ದರು . ಅಷ್ಟೇ ಅಲ್ಲದೆ ಇಂದಿನ ಸಾಮಾನ್ಯ ಸಭೆಗೂ ಕೂಡ ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸದೆ ಬಂದಿದ್ದರು . ಸಭೆಯಲ್ಲಿಯೇ ಪ್ರತಿಭಟನೆಗೆ ಮುಂದಾದ ಕೈ ಸದಸ್ಯರು , ಸಭಾಂಗಣದಲ್ಲಿಯೇ ಧರಣಿಗೆ ಕುಳಿತಿದ್ದಾರೆ .

ಗೌನ್ ಧರಿಸಿಯೇ ಸಭೆ ನಡೆಸಬೇಕೆಂದು ಪಟ್ಟು ಹಿಡಿದು ಕುಳಿತ ಸದಸ್ಯರು . ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸುವುದನ್ನ ಕೈಬಿಟ್ಟು ಅಗೌರವ ತೋರುತ್ತಿದ್ದಾರೆ .

ಮೇಯರ್ ಏಕಪಕ್ಷೀಯ ನಿರ್ಧಾರ ತಗೆದುಕೊಳ್ಳುವ ಮೂಲಕ ಅಗೌರವ ತೋರುತ್ತಿದ್ದಾರೆ . ಗೌನ್ ಧರಿಸಬೇಕು ಇಲ್ಲವೇ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ , ಮೇಯರ್ ವಿರುದ್ಧ ಘೋಷಣೆ ಕೂಗಿ ಸಭೆಯಲ್ಲಿಯೇ ಪ್ರತಿಭಟನೆಗಿಳಿದರು . ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಅರ್ಧ ಗಂಟೆ ಸಭೆಯನ್ನು ಮುಂದೂಡಿದರು .

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *