Breaking News

ಕಲಬುರಗಿ: ಫೆ.7 ರಂದು ಮಿನಿ ಉದ್ಯೋಗ ಮೇಳ

ಕಲಬುರಗಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆ.7 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿ ವಿವರ ಇಂತಿದೆ. ಜೋಯಾಲುಕ್ಕಾಸ್ದಲ್ಲಿ ಸೇಲ್ಸ್ ಟ್ರೈನಿ ಹುದ್ದೆಗೆ ಡಿಪ್ಲೋಮಾ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು. ಸೇಲ್ಸ್ ಎಕ್ಸಿಕ್ಯೊಟಿವ್ ಡಿಪ್ಲೋಮಾ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ರಿಸೆಪ್ಷನಿಸ್ಟ್ (ಮಹಿಳೆ) ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು.
ಎಸ್.ಆರ್.ವಿ. ಇಲೆಕ್ಟ್ರಾನಿಕ್ಸ್ದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಐಟಿಐ / ಡಿಪ್ಲೋಮಾ (ಕೊಪಾ/ ಇಲೆಕ್ಟ್ರಿಕಲ್) ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು.
ಫ್ರೀ ಚಾರ್ಜ್ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ ಹಾಗೂ ಟೀಮ್ ಲೀಡರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.
ಪರ್ಸೊ ಕ್ಲೆಲಿ ಇಂಡಿಯಾ ಲೀ.ದಲ್ಲಿ ಎ.ಎಲ್.ಓ./ ಕ್ಯೂಸಿ / ಕ್ಯೂಎ / ಟೀಮ್ ಲೀಡರ್ / ಮೆಶೀನ್ ಆಪರೇಟರ್ ಹುದ್ದೆಗೆ ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು.
ಜೂಮ್ಟೇಕ್ ಐಜಿ. ದಲ್ಲಿ ನೆಟ್ವರ್ಕಿಂಗ್ ವೆಲ್ಡರ್/ ಡಿಇಓ/ ಸಿಎಸ್ಟಿ/ ಟೆಲಿಕಾಲರ್/ ಎಚ್.ಆರ್‌ಎಕ್ಸಿಕ್ಯೊಟಿವ್/ ಡೆಸ್ಕ್ಟಾಪ್ ಇಂಜಿನಿಯರ್/ ಸೈಟ್ ಇಂಜಿನೀಯರ್ ಇ.ಟಿಸಿ. ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ./ಪಿಯುಸಿ/ ಯಾವುದೇ ಪದವಿ, ಐಟಿಐ, ಡಿಪ್ಲೋಮಾ, ಬಿ.ಎಮ್ (ಫಾರ್ಮಾ) ಬಿ.ಇ/ ಬಿ.ಟೇಕ್. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.
ಲಾಹೋಟಿ ಮೋಟಾರ್ಸ್ದಲ್ಲಿ ಸೇಲ್ಸ್/ ಸರ್ವಿಸ್/ ಬಾಡಿಶಾಪ್ / ಇನ್ಸೂರೆನ್ಸ್, ಫೈನಾನ್ಸ್, ಅಕೌಂಟ್ಸ್ ಹುದ್ದೆಗಳಿಗೆ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿ.ಬಿ.ಎ, ಬಿ.ಬಿ.ಎಮ್ ಯಾವುದೇ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಸೇಲ್ಸ್ / ಸರ್ವಿಸ್/ ಬಾಡಿಶಾಪ್ ಹುದ್ದೆಗೆ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿ.ಬಿ.ಎ, ಬಿ.ಬಿ.ಎಮ್. ಯಾವುದೇ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು.
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಜೆರಾಕ್ಸ್ ರೆಸ್ಯೂಮ್(ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್ಕಾರ್ಡ್ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

Share News

About bigtvnews22

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *