ಹುಬ್ಬಳ್ಳಿ: ಮುಂದಿನ ಮೂರುವರೆ ವರ್ಷ ನಮ್ಮ ಸರ್ಕಾರಕ್ಕೆ ಏನು ಆಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಹುಬಳ್ಳಿಯಲ್ಲಿಂದು ಪ್ರಭಾವಿ ಸಚಿವರ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗಲೇ ಬಾರದಾ? ಎರಡಮೂರು ದಿನಕ್ಕೊಮ್ಮೆ ನಾನು ಗೃಹ ಸಚಿವರ ಮನೆಯಲ್ಲೇ ಇರ್ತೇನೆ ನಮ್ಮ ಪಕ್ಷದವರು ಕೂಡ ಹೋಗಬಾರದು ಅಂದ್ರೆ ಹೇಗೆ?ಪರಮೇಶ್ವರ, ಸುರ್ಜೆವಾಲಾ, ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ ಕರ್ನಾಟಕದ ಬಗ್ಗೆ ಆಗ್ತಾ ಇರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ ನಾವು ಮೂರುವರೆ ವರ್ಷ ಒಳ್ಳೆಯ ಆಡಳಿತ ಕೊಡ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪುತ್ರ ಪ್ರಿಯಾಂಕ್ ಖರ್ಗೆ ಸಮರ್ಥಿಸಿ, ಗಂಗಾ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತಾ? ಬಿಜೆಪಿ ಅವರು ಹಿಂದೂ ವಿರೋಧಿ ಅಂತಾರೆ ನಮ್ಮ ದೇಶದಲ್ಲಿ ಬುದ್ದಿಸಮ್, ಜೈನಿಸಮ್, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಹುಟ್ಟಿವೆ. ಈ ನಾಲ್ಕು ಧರ್ಮಗಳು ಹುಟ್ಟಿದ್ದು ಹಿಂದೂ ಧರ್ಮದ ವಿರುದ್ಧವಾಗಿ ಯಾವುದರಲ್ಲಿ ಸಮಾನತೆ, ಸ್ವಾಭಿಮಾನ ಇರಲಿಲ್ಲ ಅದರ ವಿರುದ್ಧ ಹುಟ್ಟಿವೆ ಬಸವಣ್ಣ ಅವರು ದೇಶ ದ್ರೋಹಿ ನಾ? ಹಿಂದೂ ವಿರೋಧಿನಾ?ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇದೆಯಾ? ಕೇವಲ ಗಂಗಾ ಅಷ್ಟೇ ಅಲ್ಲಾ ದೇಶದ ಯಾವುದೇ ನದಿಯಲ್ಲಿ ಹೋಗಿ ಡುಮಕಿ ಹಾಕಿದ್ರೆ ಪಾಪ ಪರಿಹಾರ ಆಗೋದಿಲ್ಲ, ನಾವು ದುಡಿತಾ ಇರೋದಕ್ಕೆ ಅನುದಾನ ಕೊಡಿ ಸಾಕು. ನಮಗೆ ದೇಶ ದ್ರೋಹಿ ಸರ್ಟಿಫಿಕೇಟ್ ಕೊಡೋಕೆ ಇವರ್ಯಾರು? ಎಕನಾಮಿಕ್ ಸರ್ವೇ ರಿಪೋರ್ಟ್ ಮುಚ್ಚಿ ಹಾಕೋಕೆ ಹೀಗೆಲ್ಲಾ ಮಾಡ್ತಾ ಇದ್ದಾರೆ. ಟ್ರಂಪ್ ಇನ್ವಿಟಷನ್ ಕೊಡಲಿಲ್ಲ ಇಂತಹ ವಿಷಯಗಳ ಮೂಲಕ ಅದನ್ನು ಮುಚ್ಚಿ ಹಾಕೋ ಯತ್ನ ನಡೆಯುತ್ತಿದೆ.
ರಾಷ್ಟ್ರಪತಿಗಳ ಕುರಿತು ಸೋನಿಯಾ ಗಾಂಧಿ ಹೇಳಿಕೆಗೆ ಪ್ರಿಯಾಂಕ್ ಸಮರ್ಥಿಸಿ, ಮುಖ್ಯಮಂತ್ರಿಗಳು ಮೂರುವರೆ ಗಂಟೆ ಭಾಷಣ ಮಾಡಿದ್ರು ಇಂಗ್ಲಿಷ್ ನಲ್ಲಿ ಟ್ರಾನ್ಸಲೆಟ್ ಮಾಡಿ ಯಾವ ಕಡೆ ಕಾನ್ಸನ್ಟ್ರೇಟ್ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಪೂಜೆ ಮಾಡಿದ ಫೋಟೋ ವೈರಲ್ ವಿಚಾರವಾಗಿ ಖರ್ಗೆ ಸಾಹೇಬ್ರು ಬುದ್ಧ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು, ಅವರ ಆಚರಣೆ ನನ್ನ ಮೇಲೆ, ನನ್ನ ಆಚರಣೆ ನನ್ನ ಮಕ್ಕಳ ಮೇಲೆ ಆಗೋದಿಲ್ಲ ನಿಮ್ಮ ಭಕ್ತಿ ನಿಮಗೆ ನಮ್ಮ ಭಕ್ತಿ ನಮಗೆ ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು, ಮನಶಾಂತಿಗಾಗಿ ಇರ್ಬೇಕು. ಭಕ್ತಿ ವ್ಯಕ್ತಿಗೆ ಬಂದ್ರೆ ಸರ್ವಾಧಿಕಾರಿ ಆಗ್ತಾನೆ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು.
ಇಡಿ ಯಾಕೆ ಮುಡಾ ತನಿಖೆ ಮಾಡ್ತಾ ಇದೆ? ಮನಿ ಲ್ಯಾಡರಿಂಗ್ ನಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಅಂತ ಬಿಂಬಿಸಿದ್ದಾರೆ. ವಿಜಯೇಂದ್ರ ಸಲ್ಲಿಸಿರೋ ಅಫಿಡೆವಿಟ್ ನಲ್ಲಿ ಮನಿ ಲ್ಯಾಂಡರಿಂಗ್ ಅಂಶವಿದೆ ಆದರೆ ವಿಜಯೇಂದ್ರ ಅವರ ವಿಚಾರ ಇದುವರೆಗೂ ಬಹಿರಂಗಗೊಂಡಿಲ್ಲ ಸಿದ್ದರಾಮಯ್ಯ ಅವರದ್ದು ಹೇಗೆ ಆಚೆ ಬರುತ್ತೆ ಇದೆಲ್ಲ ಪೂರ್ವ ನಿಯೋಜಿತ ಅಷ್ಟೇ ಅಷ್ಟು ಇದ್ದಿದ್ರೆ ಮೇಲೆ ಕೂತ ಇಬ್ಬರು ಬಿಡ್ತಾ ಇದ್ರಾ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

