Breaking News
Featured Video Play Icon

ಮದರಸಾದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ: ಕಚೇರಿಗೆ ಕರೆಸಿ ಮನಬಂದಂತೆ ಹಲ್ಲೆ

ಫೆಬ್ರವರಿ 20: ಬೆಂಗಳೂರಿನ ಥಣಿಸಂದ್ರದಲ್ಲಿರುವ ಮದರಸಾದಲ್ಲಿ ಮೊಹಮ್ಮದ್ ಹಸನ್ ಎಂಬಾತ ಬಾಲಕಿಯರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ಮದರಸ 2021ರಿಂದ ನಡೆಯುತ್ತಿದೆ. ಇಲ್ಲಿ 200 ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ..

ಮೊಹಮ್ಮದ್ ಹಸನ್ ಈ ಮದರಸ ನಡೆಸ್ತಿದ್ದು, ಈತನ ಸಹೋದರಿ ನಿಶಾ ಪ್ರಾಂಶುಪಾಲೆ ಆಗಿದ್ದಾರೆ. ಬಾಲಕಿಯರು ತಪ್ಪು ಮಾಡಿದ್ದಾರೆಂದು ಆರೋಪಿಸಿ ಮೊಹಮ್ಮದ್ ಹಸನ್, ಕಚೇರಿಗೆ ಕರೆದು ನಾಲ್ಕೈದು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಾಲಕಿಯರ ಪೋಷಕರು ಗರಂ ಆಗಿದ್ದಾರೆ. ಘಟನೆ ದೃಶ್ಯ ಕಂಡು ಪೋಷಕರು ಮದರಸ ಮುಂದೆ ಗಲಾಟೆ ಮಾಡಿದ್ದಾರೆ. ಮದರಸ ಪ್ರಿನ್ಸಿಪಲ್ ಸಹೋದರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿ ಮೊಹಮ್ಮದ್ ಹಸನ್​ನನ್ನು ಬಂಧಿಸಿದ್ದಾರೆ…

Share News

About Shaikh BigTv

Check Also

ರಾಜ್ಯ ಸರ್ಕಾರ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಬೇಕು: ಬಿ.ಟಿ.ಕುಮಾರಸ್ವಾಮಿ

ಚಿತ್ರದುರ್ಗ: ಸವಿತಾ ಸಮಾಜ ಬಾಂಧವರು ಶ್ರಮ ಹಾಗೂ ಕಾಯಕ ಜೀವಿಗಳಾಗಿದ್ದಾರೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣುತ್ತಿದ್ದಾರೆ ಎಂದರೆ, ಇದರ …

Leave a Reply

Your email address will not be published. Required fields are marked *

You cannot copy content of this page