Breaking News

ಉತ್ತರ ಭಾರತಕ್ಕೂ ಲಗ್ಗೆ ಇಟ್ಟ “ನಂದಿನಿ”.

ರಾಜ್ಯದ ಹೆಮ್ಮೆಯ ಹಾಲಿನ ಬ್ರಾಂಡಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್‌ ವ್ಯಕ್ತವಾಗಿದೆ. ಕೆಎಂಎಫ್‌ನ ಹಾಲಿ ಹಾಗೂ ತುಪ್ಪಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೆಹಲಿಗೆ ಕಾಲಿಟ್ಟಿರುವ ನಂದಿನಿ ಬ್ರ್ಯಾಂಡ್‌ ಸ್ವಲ್ಪದಿನದಲ್ಲೇ ಉತ್ತರ ಪ್ರದೇಶದ ನೋಯ್ಡಾಗೆ ಲಗ್ಗೆ ಇಡಲಿದೆ . ಶೀಘ್ರದಲ್ಲಿಯೇ ಉತ್ತರ ಪ್ರದೇಶದ ನೊಯ್ಡಾಗೆ ನಂದಿನಿ ಹಾಲು ಸರಬರಾಜು ಆಗಲಿದೆ. ಅಲ್ಲಿನ ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡುಲು ಉತ್ತರ ಪ್ರದೇಶಕ್ಕೆ ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಟೀಮ್‌ ಭೇಟಿಕೊಟ್ಟಿದೆ. ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶ ಮಾತ್ರವಲ್ಲದೆ, ರಾಜಸ್ಥಾನ, ಮುಂಬೈಯಲ್ಲೂ ನಂದಿನಿ ಬ್ರಾಂಡನ್ನು ವಿಸ್ತರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

Share News

About BigTv News

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *