ನಟ ಚಂದನ್ ಶೆಟ್ಟಿ ಹಾಗೂ ಕ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ವರ್ಷಗಳು ಕಳೆಯುತ್ತಾ ಬಂದರೂ, ಒಂದಲ್ಲ ಒಂದು ವಿಚಾರಕ್ಕೆ ಚಂದನ್-ನಿವೇದಿತಾ ವಿಚ್ಛೇದನ ಸುದ್ದಿಯಲ್ಲಿರುತ್ತದೆ.ಮುದ್ದು ರಾಕ್ಷಸಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಚಂದನ್ ಶೆಟ್ಟಿ ಅವರನ್ನು ನೋಡಿದಾಗ ಎಮೋಷನಲ್ ಆಗಿದ್ದೀರಿ. ಹಾಗಾದರೆ ಮತ್ತೆ ಒಂದಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಬಗ್ಗೆ ಮಾತನಾಡಿದ ಅವರು, ‘ನನ್ನ ಬಗ್ಗೆ ಕಮೆಂಟ್ ಏನೇ ಬಂದರೂ ಸಹ ನಾನು ನೋಡುವುದೂ ಇಲ್ಲ. ಕಮೆಂಟ್ ಮಾಡುವವರು ಮಾಡುತ್ತಲೇ ಇರಲಿ. ಬೇರೆಯವರಿಗೆ ಕೆಟ್ಟದಾಗಿ ಮಾತನಾಡಿ ಅವರಿಗೆ ಖುಷಿ ಸಿಗುತ್ತದೆ ಅಂದರೆ ಉಳಿದದನ್ನು ದೇವರು ನೋಡಿಕೊಳ್ಳುತ್ತಾನೆ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಂಡು ಖುಷಿಯಾಗಿ ಇರುತ್ತೇನೆ. ನಮ್ಮನ್ನು ಇಷ್ಟಪಡುವವರು ಸಹ ಇದ್ದೇ ಇರುತ್ತಾರೆ’ ಎಂದು ನಿವೇದಿತಾ ಗೌಡ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

