ನಿನ್ನೆಯಷ್ಟೇ ಸ್ವಾಮೀಜಿ ಓರ್ವರ ಕಾಲಿಗೆ ಸಮವಸ್ತ್ರದಲ್ಲೇ ಪೊಲೀಸರು ನಮಸ್ಕಾರ ಮಾಡಿ ನೋಟು ಪಡೆದುಕೊಂಡ ವಿಡಿಯೋ ಬಿಗ್ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು…. ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ಪೊಲೀಸರು ನಮಸ್ಕಾರ ಮಾಡಿ, ಹಣ ಪಡೆದಿದ್ದ ವಿಡಿಯೋ ಬೆನ್ನಲ್ಲೇ ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು
ಜನ ಆಕ್ರೋಶ ವ್ಯಕ್ತಪಡಿಸಿದ್ದರೆ. ಇನ್ನು ವಿಡಿಯೊದಲ್ಲಿ ಏಕವಚನದಲ್ಲೆ ಪೊಲೀಸರ ಜೊತೆ ಮಾತನಾಡುತ್ತಿದ್ದ ಶಿವಕುಮಾರ ಸ್ವಾಮೀಜಿ ಕಾಲಿಗೆ ಬಿದ್ದ ಪೊಲೀಸರಿಗೆ ‘ಡ್ಯೂಟಿಯಲ್ಲಿದ್ದಾಗ ನಮಸ್ಕಾರ ಮಾಡಬೇಡ ಸೆಲ್ಯೂಟ್ ಬೇಕಿದ್ರೆ ಹೊಡಿ ಎಂದಿದ್ದರು. ಆರು ಜನ ಕಾನ್ಸ್ಟೇಬಲ್ಗಳನ್ನು ವರ್ಗಾವಣೆ ಮಾಡಿ ಎಂದು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಆದೇಶ ಹೊರಡಿಸಿದ್ದಾರೆ.ಬಾದಾಮಿಯಿಂದ ವಿವಿಧ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಎಎಸ್ಐ ಜಿಬಿ ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಡಿಜೆ ಶಿವಪುರ ಎಎಸ್ಐ ಬಾಗಲಕೋಟೆ ಗ್ರಾಮೀಣ ಠಾಣೆ, ನಾಗರಾಜ ಅಂಕೋಲೆ ಬೀಳಗಿ ಠಾಣೆ, ಜಿಬಿ ಅಂಗಡಿ ಇಳಕಲ್ ನಗರ ಠಾಣೆ, ರಮೇಶ್ ಈಳಗೇರ ಬಾಗಲಕೋಟೆ ಗ್ರಾಮೀಣ ಠಾಣೆ, ರಮೇಶ್ ಹುಲ್ಲೂರು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ವೀಡಿಯೋಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ದುಡ್ಡು ಕೊಟ್ಟು ಆಶೀರ್ವಾದ ಮಾಡುವುದು ನಮ್ಮ ಮಠದ ಪರಂಪರೆ. ಪೊಲೀಸರು ಭಕ್ತರಾಗಿ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಅವರಿಗೆ ನಾವು ಲಂಚ ಕೊಟ್ಟಿಲ್ಲ. ನಾವು ದಿವಸದ ದಾಸೋಹಕ್ಕೆ ಎಷ್ಟು ಹಣ ಬೇಕು ಅಷ್ಟು ಇಟ್ಕೊಂಡು. ಉಳಿದ ಹಣವನ್ನು ನಾವು ಭಕ್ತರಿಗೆ ಕೊಡುತ್ತೇವೆ. ಇದು ಭಕ್ತರನ್ನು ಬೆಳೆಸುವ ಮಠವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

