Breaking News

ನಗರದ ಖಾಸಗಿ ಹೊಟೆಲನಲ್ಲಿ ಕಾಂಗ್ರೆಸ್‌ ರಾಷ್ರಿಯ ಪ್ರತಿಪಕ್ಷ ಸಭೆ.

ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರೀಯ ಪ್ರತಿಪಕ್ಷಗಳ ಎರಡನೇ ಹಂತದ ಸಭೆ ನಡೆಯಲಿದೆ. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.

ಯಾರೆಲ್ಲ ಭಾಗಿ?: ಕಾಂಗ್ರೆಸ್, ಎಎಪಿ, ಟಿಎಂಸಿ, ಡಿಎಂಕೆ, ಜೆಡಿಯು, ಎನ್ ಸಿಪಿ,ಕೇರಳ ಕಾಂಗ್ರೆಸ್( ಎಂ), ಕೇರಳ ಕಾಂಗ್ರೆಸ್( ಜೆ), ಆರ್ ಎಸ್ ಪಿ, ಫಾರ್ವರ್ಡ್ ಬ್ಲಾಕ್, ವಿಸಿಕೆ, ಎಂಡಿಎಂಕೆ, ಅಕಾಲಿದಳ, ಎಸ್ ಪಿ ಸೇರಿದಂತೆ 24 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆಸಭೆಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರು: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ‌ ಗಾಂಧಿ, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ ಕೇಜ್ರೀವಾಲ್ ಹಾಗೂ ತೇಜಸ್ವಿ ಯಾದವ್, ಅಖಿಲೇಶ್ ಸಿಂಗ್ ಯಾದವ್, ಶರದ್ ಪವಾರ್ ಪಾಲ್ಗೊಳ್ಳುವ ಸಾಧ್ಯತೆ ಇದೆ.

Share News

About BigTv News

Check Also

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋಶೂಟ್ ಪೋಸ್ಟ್‌ಗೆ ಬ್ರೇಕ್..? ಡಿಜಿಪಿಗೆ ಶಿಫಾರಸು ಪತ್ರ..

ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಬೇಡ..! ಖಾಕಿಯ ಘನತೆ ಉಳಿಸಲು ಕಠಿಣ ನಿಯಮಕ್ಕೆ ಶಿಫಾರಸು… ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್, …

Leave a Reply

Your email address will not be published. Required fields are marked *