Breaking News
Oplus_131072

ಅನೈತಿಕ ಸಂಬಂಧದ ವಿಚಾರವಾಗಿ ಪತಿ ಪತ್ನಿಯ ನಡುವೆ ಗಲಾಟೆ,ಪತ್ನಿಯನ್ನು ಹೊಡೆದು ಕೊಂದ ಗಂಡ.

ಏಳು ವರ್ಷಗಳ ಹಿಂದೆ ಅನಿತಾ ಹಾಗೂ ಬಾಬು ಮದುವೆಯಾಗಿದ್ದರು. ಬಾಬು ಆನೇಕಲ್ ತಾಲೂಕಿನ ರಾಚಮಾನಹಳ್ಳಿ ಗ್ರಾಮದ ವಾಸಿಯಾದರೆ, ಅನಿತಾ ಮೂಲತಃ ಮೈಸೂರಿನ ಚಿಕ್ಕ ಮಾರ್ಕೆಟ್ ಏರಿಯಾದವರು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಕಳೆದ ವಾರ ಬಾಬು ಕುಟುಂಬಸ್ಥರು ಅನಿತಾ ಮನವೊಲಿಸಿ ಮನೆಗೆ ವಾಪಸ್‌ ಕರೆದುಕೊಂಡು ಬಂದಿದ್ದರು. ಆದರೆ ದಂಪತಿ ಇದೇ ವಿಚಾರವಾಗಿ ಪದೇ ಪದೇ ಜಗಳವಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದರು.ನಿನ್ನೆ ರಾತ್ರಿಯೂ ದಂಪತಿ ಜಗಳವಾಡಿದ್ದು, ಬಾಬು ಪತ್ನಿಗೆ ಹೊಡೆದಿದ್ದ. ನಂತರ ಹೋಗಿ ಮಲಗಿದ್ದ ಆತ ಬೆಳಗ್ಗೆ ಎದ್ದು ನೋಡುವಾಗ ಪತ್ನಿ ಮೃತಪಟ್ಟಿರುವುದು ತಿಳಿದು ಬಂದಿದೆ. ಇದೀಗ ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *