Breaking News

ಅರೆಕಾಲಿಕ ಉದ್ಯೋಗ ಹೆಸರಲ್ಲಿ ವಂಚನೆ: ಕಂಪೆನಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಅರೆಕಾಲಿಕ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದಡಿ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ವೆಕ್ಸಾನ್ ಕಂಪೆನಿ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ವೆಕ್ಸಾನ್ ಕಂಪೆನಿಯ ಸಂಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ಶೆವಾಲೆ, ಸುನಿಲ್ ಸಾವಂತ್, ಅನನ್ ಅಹೈರ್, ಮಂಗಳೂರಿನ ಶಾಖೆಯ ನೌಕರರಾದ ಪಲ್ಲವಿ, ಅಂಜಲಿ, ನವ್ಯ, ನಿವಿಶ್, ಜಯಶ್ರೀ, ಜುನೈದ್ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರೆಯನ್ನು ಜನವರಿಯಲ್ಲಿ ನವ್ಯಾ ಎಂಬಾಕೆ ಸಂಪರ್ಕಿಸಿ, ತಾನು ವೆಕ್ಸಾನ್ ಕಂಪೆನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಕೆಲಸ ಮಾಡಿ ತಿಂಗಳಿಗೆ 15,000 ದಿಂದ 30,000 ರೂ. ಗಳಿಸಬಹುದು. ಸಾಫ್ಟ್ ವೇರ್, ಡೇಟಾ ಎಂಟ್ರಿ ಕೆಲಸ. ತರಬೇತಿ ಸಮಯದಲ್ಲಿ ಉಳಿದುಕೊಳ್ಳಲು ಮತ್ತು ಆಹಾರಕ್ಕಾಗಿ ಶುಲ್ಕವಾಗಿ 2,500 ರೂ. ಭರಿಸಬೇಕು ಎಂದು ತಿಳಿಸಿದ್ದಾಳೆ. ಅದಕ್ಕೆ ಒಪ್ಪಿಕೊಂಡು 2,500 ರೂ. ಪಾವತಿಸಿ, ಸಂಸ್ಥೆಯಲ್ಲಿ ಇತರ ಉದ್ಯೋಗಾಕಾಂಕ್ಷಿಗಳೊಂದಿಗೆ ತರಬೇತಿ ಪಡೆದಿದ್ದರು. ಈ ವೇಳೆ, 51 ಸಾವಿರ ರೂ. ಮೌಲ್ಯದ ವಿವಿಧ ಕಂಪೆನಿಗಳ ಸೊತ್ತು ಖರೀದಿಸಬೇಕು. ಇತರರನ್ನು ಸಂಸ್ಥೆಗೆ ಸೇರಿಸಬೇಕು. ಅವರು ಕೂಡ ಸೊತ್ತು ಖರೀದಿಸಿದರೆ ಕಮಿಷನ್ ದೊರೆಯುತ್ತದೆ ಎಂದು ತಿಳಿಸಿದ್ದಾರೆ. ಅದರಂತೆ ನಿವೇಶ್ ಎನ್ನುವ ವ್ಯಕ್ತಿಯ ಗೂಗಲ್ ಪೇ ನಂಬರ್ ಗೆ 51 ಸಾವಿರ ರೂ. ಪಾವತಿಸಿದ್ದು, ಆದರೆ ಸಂಸ್ಥೆಯ ಕೊಟ್ಟಿರುವ ವಸ್ತುಗಳು ಗುಣಮಟ್ಟ ಇಲ್ಲದ್ದಾಗಿತ್ತು. ಮಾತ್ರವಲ್ಲದೆ ಸಾಫ್ಟ್ ವೇರ್, ಡೇಟಾ ಎಂಟ್ರಿ ಕೆಲಸವೆಂದು ನಂಬಿಸಿ, ಬಳಿಕ ಇತರರನ್ನು ಕಂಪೆನಿಗೆ ಸೇರಿಸುವಂತೆ ಮಾನಸಿಕವಾಗಿ ಒತ್ತಡ ಹಾಕಿ, ಅವರು ಹೇಳಿದಂತೆ ನಡೆದುಕೊಳ್ಳುವ ರೀತಿಯಲ್ಲಿ ಬ್ರೈನ್ ವಾಶ್‌ ಮಾಡಿದ್ದಾರೆ. ಒತ್ತಾಯಪೂರ್ವಕವಾಗಿ ಅವರು ಹೇಳಿದ ದಾಖಲಾತಿಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *