ನವಲಗುಂದ: ಮಳೆಯಿಂದ ಮನೆಯೊಂದು ಕುಸಿದು ಅತ್ತೆ, ಸೊಸೆ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.
ಹನಸಿ ಗ್ರಾಮದ ಬಾಪುಗೌಡ ಬಸನಗೌಡ ಪಾಟೀಲ ಎಂಬುವರ ಮನೆ ಇದಾಗಿದ್ದು, ಮನೆ ಬೀಳುತ್ತಿದ್ದಂತೆಯೇ ಮನೆಯ ಅಡಿಯಲ್ಲಿ ಸಿಲುಕಿದ ಅತ್ತೆ ಮಂಗಳಾ ಪಾಟೀಲ (55) ಹಾಗೂ ಸೊಸೆ ಸುವರ್ಣ ಪಾಟೀಲ (37) ಅವರನ್ನು ಗ್ರಾಮಸ್ಥರೇ ರಕ್ಷಣೆ ಮಾಡಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇನ್ನು ಮಂಗಳಾ ಅವರ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಸುವರ್ಣ ಎಂಬುವರಿಗೆ ತಲೆಗೆ ಪೆಟ್ಟಾಗಿದೆ. ಮಣ್ಣಿನ ಹಳೆಯ ಮನೆಯಾಗಿದ್ದರಿಂದ ನಿರಂತರ ಮಳೆಗೆ ಕುಸಿದಿದೆ. ಪ್ರಾಣಾಪಾಯದಿಂದ ಪಾರಾಗಿರುವ ಅತ್ತೆ-ಸೊಸೆಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

