Breaking News

ಪ್ರೀತಿಸಿ ಮದುವೆಯಾದ ಜೋಡಿಗೆ ಪೊಲೀಸರೇ ವಿಲನ್ – ಕಟ್ಟಿದ್ದ ತಾಳಿ ಬಿಚ್ಚಿಸಿ ಕಿರುಕುಳ?

ತುಮಕೂರು: ಪ್ರೀತಿಸಿ ಮದುವೆಯಾದ ನವಜೋಡಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಯುವತಿಯ ಪೋಷಕರೊಂದಿಗೆ ಸೇರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಧುಗಿರಿಯಲ್ಲಿ ಕೇಳಿಬಂದಿದೆ. ರಾಕೇಶ್ ಹಾಗೂ ಗಾನಶ್ರೀ ಪರಸ್ಪರ ಪ್ರೀತಿಸಿ, ಜುಲೈ 9ರಂದು ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ಮದುವೆಯಾಗಿದ್ದರು. ಮದುವೆ ವಿಷಯ ತಿಳಿದ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಎಎಸ್‌ಐ ಹನುಮಂತರಾಯಪ್ಪ ಹಾಗೂ ಹೆಡ್ ಕಾನ್‌ಸ್ಟೇಬಲ್ ಶಿವಣ್ಣ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಹಾಗೂ ಮರುಮದುವೆ ಮಾಡಿಸುವುದಾಗಿ ಹೇಳಿ ಗಾನಶ್ರೀ ಅವರ ತಾಳಿಯನ್ನು ಬಿಚ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಯುವತಿಯನ್ನು ಎರಡು ತಿಂಗಳು ಮನೆಯಲ್ಲೇ ಕೂಡಿಹಾಕಿ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ. ಮನೆಯಿಂದ ಹೊರಬಂದ ಗಾನಶ್ರೀ ಮತ್ತೆ ರಾಕೇಶ್‌ನನ್ನು ಭೇಟಿಯಾಗಿ ಪುನಃ ಮದುವೆಯಾಗಿದ್ದಾರೆ. ಬಳಿಕ ಪೊಲೀಸ್ ಠಾಣೆ ಎದುರು ವಿಡಿಯೋ ಮಾಡಿ, ತಮಗೆ ಜೀವಭಯವಿದ್ದು ರಕ್ಷಣೆ ನೀಡುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Share News

About BigTv News

Check Also

ತೋಟದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಪೊಲೀಸಪ್ಪನ ಪುತ್ರ: ಅತ್ತ ತಂದೆಯಿಂದ ಜಾಗೃತಿ, ಇತ್ತ ಮಗನಿಂದ ಕುಕೃತ್ಯ!

ತುಮಕೂರು: ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ಗಿಡ …

Leave a Reply

Your email address will not be published. Required fields are marked *