Breaking News

ತಿಂಗಳ ಹಿಂದೆ ಮೃತಪಟ್ಟಿದ್ದ ಪುತ್ರಿ ದಿಢೀರ್​ ಕಣ್ಣೆದುರಿಗೆ! ಹೆತ್ತವರು ಗಾಬರಿ, ಪೊಲೀಸರು ಕಂಗಾಲು

18 ತಿಂಗಳ ಹಿಂದೆ ತಮ್ಮ ಕೈಯಿಂದಲೇ ಮಗಳ ದೇಹವನ್ನು ಮಣ್ಣು ಮಾಡಿದ್ದ ಪೋಷಕರಿಗೆ ಇದೀಗ ದಿಢೀರ್​ ಆಕೆ ತಮ್ಮ ಮುಂದೆ ಪ್ರತ್ಯಕ್ಷವಾಗಿದ್ದನ್ನು ಕಂಡು ಅಕ್ಷರಶಃ ಕುಸಿದು ಹೋಗಿದ್ದಾರೆ. ಮೃತ ಮಗಳನ್ನು ಪತ್ತೆಹಚ್ಚಿದ ನಾವು, ಆಕೆಯ ಅಂತ್ಯಕ್ರಿಯೆಯನ್ನು ಮಾಡಿ ಮನೆಗೆ ಬಂದಿದ್ದೆವು. ತನ್ನ ಕಣ್ಮರೆ ಬಗ್ಗೆ ವಿವರಿಸಿದ ಲಲಿತಾ, ನಾನು ಶಾರುಖ್ ಜೊತೆ ಭಾನುಪಾರಕ್ಕೆ ಹೋಗಿದ್ದೆ. ಅಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದೆ. ಈ ವೇಳೆ ಶಾರುಖ್ ನನ್ನನ್ನು ಮತ್ತೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ. ಕೋಟಾದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಇದ್ದೆ. ಅವರ ಕೈಯಿಂದ ಹೇಗೋ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಿತು. ತಕ್ಷಣ ಅವರಿವರ ಸಹಾಯದಿಂದ ನನ್ನೂರಿಗೆ ಬಂದು ತಲುಪಿದೆ ಎಂದು ಹೇಳಿದ್ದಾಳೆ. ಯುವತಿ ತನ್ನ ಗುರುತನ್ನು ದೃಡಪಡಿಸಲು ತನ್ನ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದಾಳ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *