Breaking News

ಪ್ರಿಯಾಂಕಾ ಗಾಂಧಿ ಕಾಲಿ ಹೂ ಗುಚ್ಛ ನಿಡಿ ಸ್ವಾಗತ…

ಇಂದೋರ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಖಾಲಿ ಹೂಗುಚ್ಛ ನೀಡಿ ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದೋರ್‌ನ ಚುನಾವಣಾ ಸಭೆಯ ವೇದಿಕೆಯಲ್ಲಿ ಈ ಘಟನೆ ನಡೆದಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸ್ವಾಗತಿಸುವಾಗ ಸ್ಥಳೀಯ ಪಕ್ಷದ ನಾಯಕರೊಬ್ಬರು ಅವರಿಗೆ ಖಾಲಿ ಪುಷ್ಪಗುಚ್ಛವನ್ನು ನೀಡಿದರು. ಇದನ್ನು ನೋಡಿದ ಪ್ರಿಯಾಂಕಾ ಅವರಿಗೆ ಮುಗುಳ್ನಗೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಇಂದೋರ್-5 ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಅವರನ್ನು ವೇದಿಕೆಯಲ್ಲಿ ಸ್ವಾಗತಿಸುತ್ತಿದ್ದಾಗ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಖಾಲಿ ಹೂಗುಚ್ಛವನ್ನು ನೀಡಿದರು. ಈ ಹೂಗುಚ್ಛದಲ್ಲಿ ಕೇವಲ ಎಲೆಗಳು ಮಾತ್ರ ಇದ್ದವು. ಇದರಲ್ಲಿ ಒಂದೇ ಒಂದು ಹೂವು ಕೂಡ ಇರಲಿಲ್ಲ. ಬೊಕ್ಕೆ ಸಂಪೂರ್ಣ ಖಾಲಿಯಾಗಿತ್ತು.

Share News

About BigTv News

Check Also

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! …

Leave a Reply

Your email address will not be published. Required fields are marked *