Breaking News
Oplus_131072

ಬೆಂಗಳೂರು ಅಕಾಲಿಕ ಮಳೆಗೆ ಮರಬಿದ್ದು ಪ್ರಾಣ ಬಿಟ್ಟ 3 ವರ್ಷದ ಬಾಲಕಿ

ನಿನ್ನೆ ರಾತ್ರಿ ಜೀವನ್ ಭೀಮಾನಗರದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ತಡರಾತ್ರಿ ಸುರಿದ ಭಾರೀ ಮಳೆಗೆ ಮರಬಿದ್ದು 3 ವರ್ಷದ ಬಾಲಕಿ ರಕ್ಷಾ ಮೃತಪಟ್ಟಿದ್ದಾಳೆ.ಈ ಘಟನೆ ಬಗ್ಗೆ ಮಾತಾಡಿದ ಮೃತ ಮಗುವಿನ ಮಾವ ವಿಜಯ್, ರಾತ್ರಿ 8.30ರ ಸುಮಾರಿಗೆ ಮರ ಬಿದ್ದ ವಿಷಯ ತಿಳಿತು. ಆಸ್ಪತ್ರೆಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಮಗು ಉಳಿಯಲಿಲ್ಲ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಗು ರಕ್ತಸ್ರಾವ ಆಗಿ ಮೃತಪಟ್ಟಿದೆ. ಮಳೆ ಬಂದಾಗ ಪದೇ ಪದೇ ಇಂತ ಘಟನೆ ಆಗುತ್ತಲೇ ಇರುತ್ತವೆ. ಈಗ ರಾತ್ರಿ ಬಂದು ಪರಿಹಾರ ಕೊಡ್ತೀವೆ ಅಂತಿದ್ದಾರೆ. ಬದುಕಿ ಬಾಳಬೇಕಿದ್ದ ಪುಟ್ಟ ಕಂದಮ್ಮನ ಜೀವ ತೆಗೆದು ಬಿಟ್ಟಿದೆ. ಮರಗಳ ಬಗ್ಗೆ ಗಮನಹರಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *