Breaking News

ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

12 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ತಾಂಡಾದ ಉಮೇಶ ರತ್ನಪ್ಪ ಲಮಾಣಿ (30) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 60,500 ದಂಡವನ್ನು ನಗರದ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ವಿಶೇಷ ಪೊಕ್ಸೊ ಕೋರ್ಟ್‌ ವಿಧಿಸಿದೆ. ನ್ಯಾಯಾಧೀಶ ರಾಜಕುಮಾರ ಸಿ. ಅವರು ಆದೇಶ ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೊಕ್ಸೊ) ಶಿಕ್ಷೆ ವಿಧಿಸಿದ್ದಾರೆ. ದಂಡದ ಹಣ ₹ 60,500ಮತ್ತು ಪರಿಹಾರ ನಿಧಿಯಿಂದ ₹ 6 ಲಕ್ಷವನ್ನು ಸಂತ್ರಸ್ತ ಬಾಲಕಿ ನೀಡುವಂತೆ ಆದೇಶಿಸಿದ್ದಾರೆ. 2022 ಆಗಸ್ಟ್‌ 16ರಂದು ಪ್ರಕರಣ ನಡೆದಿತ್ತು. ನೆಲ್ಲಿಹರವಿ ತಾಂಡಾದ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಾಲಕಿಯನ್ನು ‌ಉಮೇಶ ಬೈಕ್‌ನಲ್ಲಿ ಕರೆದೊಯ್ದಿದ್ದ. ಬಮ್ಮಿಗಟ್ಟಿ ಸಮೀಪ ಬೈಕ್‌ ನಿಲ್ಲಿಸಿ, ಬಾಲಕಿಯನ್ನು ಹೊಲಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶೈಲಾ ಅಂಗಡಿ ವಾದ ಮಂಡಿಸಿದ್ದರು.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *