ನವದೆಹಲಿ: 2018ರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ನಡೆಸಿದ್ದ ಫೈರಿಂಗ್‌ನಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಬಿಜೆಪಿ ಶಾಸಕ ರಾಜ ಕುಮಾರ್ ಸಿಂಗ್ ಅವರಿಗೆ ದೆಹಲಿ ಕೋರ್ಟ್ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ₹25 ಲಕ್ಷ ದಂಡ ವಿಧಿಸಿದೆ. ದೆಹಲಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ತೀರ್ಪಿನ ಕೆಲ ಭಾಗವನ್ನು ಓದಿದರು. ‘ಅಪರಾಧಿಗೆ ಐಪಿಸಿ ಸೆಕ್ಷನ್ 304 ಭಾಗ-2ರ ಅನ್ವಯ 4 ವರ್ಷ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 2 ತಿಂಗಳು ಜೈಲು ವಿಧಿಸಲಾಗುತ್ತಿದೆ’ ಎಂದು ಪ್ರಕಟಿಸಿದರು. ಬಿಹಾರದ ಸಾಹೇಬ್‌ಗಂಜ್‌ನ ಬಿಜೆಪಿ ಶಾಸಕರಾದ ಸಿಂಗ್ ₹25 ಲಕ್ಷ ದಂಡವನ್ನೂ ಪಾವತಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ನನಗೆ ಯಾರನ್ನೂ ಕೊಲ್ಲುವ ಉದ್ದೇಶವಿರಲಿಲ್ಲ. ಸಾರ್ವಜನಿಕ ಪ್ರತಿನಿಧಿಯಾಗಿ ಕಳಂಕವಿಲ್ಲದ ದಾಖಲೆ ಇದೆ. ಹಾಗಾಗಿ, ತಮ್ಮನ್ನು ದೋಷಮುಕ್ತಗೊಳಿಸಬೇಕೆಂದು ಸಿಂಗ್ ವಾದಿಸಿದ್ದರು.ಫತೇಪುರ್ ಬೆರಿಯ ತೋಟದ ಮನೆಯಲ್ಲಿ ಹೊಸ ವರ್ಷದ ಪಾರ್ಟಿಯ ಸಂಭ್ರಮಾಚರಣೆ ಸಂದರ್ಭ ಸಿಂಗ್ ಗುಂಡು ಹಾರಿಸಿದ್ದರು. ಗುಂಡು ತಗುಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

