Breaking News

ಹುಬ್ಬಳ್ಳಿಯಲ್ಲಿ ಯುವಕನ ಅಪಹರಣ ಪ್ರಕರಣ: ಎಸ್‌ಬಿ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೇ..? ಪೊಲೀಸ್ ವಿರುದ್ಧ ಗಂಭೀರ ಪ್ರಶ್ನೆಗಳು…

ಹುಬ್ಬಳ್ಳಿಯಲ್ಲಿ ಯುವಕನ ಅಪಹರಣ, ಬೆತ್ತಲೆಗೊಳಿಸಿ ಹಲ್ಲೆ..! ಪೊಲೀಸ್ ಇಂಟೆಲಿಜೆನ್ಸ್ ಎಸ್‌ಬಿ ಸಿಬ್ಬಂದಿ ಎಲ್ಲಿ ಎಂಬ ಪ್ರಶ್ನೆ..!

ಹುಬ್ಬಳ್ಳಿ: ನಗರದ ಮಧ್ಯಭಾಗದಲ್ಲೇ ಯುವಕನೊಬ್ಬನನ್ನು ಅಪಹರಿಸಿ, ಶೆಡ್‌ನಲ್ಲಿ ಬೆತ್ತಲೆಗೊಳಿಸಿ ಕ್ರೂರವಾಗಿ ಹಲ್ಲೆ ನಡೆಸಿದ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳ ಕೃತ್ಯದ ಜೊತೆಗೆ, ಪೊಲೀಸ್ ಇಲಾಖೆಯ ಗುಪ್ತಚರ ಹಾಗೂ ಮಾಹಿತಿ ಸಂಗ್ರಹ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಕೇಳಿಬರುತ್ತಿವೆ…

ಇಂತಹ ಘಟನೆ ನಗರದಲ್ಲೇ ನಡೆದರೂ ಮುಂಚಿತವಾಗಿ ಪೊಲೀಸರಿಗೆ ಯಾವುದೇ ಸುಳಿವು ಸಿಗದಿರುವುದು ಇಲಾಖೆಯ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಹುಟ್ಟಿಸಿದೆ.ಪ್ರತಿ ಪೊಲೀಸ್ ಠಾಣೆಯಲ್ಲೂ ಸ್ಥಳೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಎಸ್‌ಬಿ (ಸ್ಪೆಷಲ್ ಬ್ರಾಂಚ್) ಸಿಬ್ಬಂದಿ, ಬೀಟ್ ಪೊಲೀಸರು ಹಾಗೂ ಮಾಹಿತಿ ಮೂಲಗಳ ಜಾಲ ಕಾರ್ಯನಿರ್ವಹಿಸುತ್ತವೆ…

ಹಗಲು ಹೊತ್ತಿನಲ್ಲೇ ಯುವಕನನ್ನು ಅಪಹರಿಸಿ ಶೆಡ್‌ನಲ್ಲಿ ಬಂಧನದಲ್ಲಿಟ್ಟು ಹಲ್ಲೆ ನಡೆಸುವಷ್ಟು ದೊಡ್ಡ ಘಟನೆ ನಡೆದಿದ್ದರೂ, ಈ ವ್ಯವಸ್ಥೆಗೆ ಯಾವುದೇ ಮಾಹಿತಿ ಸಿಗದಿರುವುದು ಕರ್ತವ್ಯ ಲೋಪವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಆರೋಪಿಗಳನ್ನು ಬಂಧಿಸುವುದಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಪೊಲೀಸ್ ಮಾಹಿತಿ ಸಂಗ್ರಹ ವ್ಯವಸ್ಥೆ ಎಲ್ಲಿ ವಿಫಲವಾಯಿತು, ಎಸ್‌ಬಿ ಸಿಬ್ಬಂದಿ ಹಾಗೂ ಸಂಬಂಧಿತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದರೇ ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ…

ಆದರೆ, ಈ ಹಂತದಲ್ಲಿ ಎಸ್‌ಬಿ ಸಿಬ್ಬಂದಿ ಅಥವಾ ಪೊಲೀಸರ ನಿರ್ಲಕ್ಷ್ಯ ಸಾಬೀತಾಗಿದೆ ಎಂದು ಹೇಳಲು ಅಧಿಕೃತ ತನಿಖೆಯ ಫಲಿತಾಂಶ ಅಗತ್ಯವಾಗಿದ್ದು, ತನಿಖೆಯ ಬಳಿಕವೇ ಹೊಣೆಗಾರಿಕೆ ನಿಗದಿಯಾಗಲಿದೆ.

Share News

About Shaikh BigTv

Check Also

ಆಕಸ್ಮಿಕ ಬೆಂಕಿ: ಸ್ಕಾರ್ಪಿಯೋ ಕಾರು ಸುಟ್ಟು ಭಸ್ಮ

ವಿಜಯಪುರ: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜು.18) …

Leave a Reply

Your email address will not be published. Required fields are marked *