ಹಿಂಡಮಾರನಹಳ್ಳಿ ಗ್ರಾಮದ ಮಂಜೇಗೌಡ ಅವರ ತಾಯಿ ಪುಟ್ಟಮ್ಮ ಮಂಜಾನೆ ಶೌಚಾಲಯಕ್ಕೆ ಹೋಗಲು ಮನೆಯಿಂದ ಹೊರ ಬಂದಿದ್ದಾಗ ಕಳ್ಳರು ತಲೆಗೆ ಹೊಡೆದು ಕೊರಳಲ್ಲಿ ಇದ್ದ 30 ಗ್ರಾಂ ತೂಕದ ಸರ ಕಸಿದು ಪರಾರಿಯಾಗಿದ್ದಾರೆ.ಪುಟ್ಟಮ್ಮ ನೆಲಕ್ಕೆ ಬಿದ್ದಿದ್ದು ತಲೆಗೆ ಗಾಯವಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಎಸ್ .ಪಿ ಖಾದರ್, ಡಿವೈಎಸ್‌ಪಿ ಓಂ. ಪ್ರಕಾಶ್, ಸಿಪಿಐ ಲೋಹಿತ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Oplus_131072