‘ವೆಂಕಟೇಶ್ ಪತ್ನಿ ನೀಲವೇಣಿ ಸೋದರಿ ಹಿಂದಿನ ದಿನವಷ್ಟೇ ಕೊಲೆ ಬೆದರಿಕೆ ಹಾಕಿದ್ದರು.ಕಾಟನ್ ಇಂಡಸ್ಟ್ರೀಸ್ ಮುಂಭಾಗ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದಾದ ಶಂಕೆ ವ್ಯಕ್ತವಾಗಿದೆ.ವೆಂಕಟೇಶ್ ಸಾವಿನ ಕುರಿತು ಆತನ ತಾಯಿ ದೊಡ್ಡಬಸಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ.’ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ವೆಂಕಟೇಶ್ ತಲೆ, ಕಿವಿ, ತೋಳಿನ ಬಳಿ ಗಾಯಗಳಾಗಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಮಾರಕಾಸ್ತ್ರಗಳೇನೂ ಸಿಕ್ಕಿಲ್ಲ. ತನಿಖೆ ಕೈಗೊಳ್ಳಲಾಗಿದೆ’ ಎಂದರು. ಕೊಂಚಗೇರಿ ಗ್ರಾಮದ ವೆಂಕಟೇಶ್ ಮೃತ ವ್ಯಕ್ತಿ. ಬ್ರೂಸ್ ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
