ಪೋನ್ ಮಾಡಿದರೇ NOT RESPONDING..!
ಹುಬ್ಬಳ್ಳಿ: ಸಾರ್ವಜನಿಕ ಅನುಕೂಲತೆ ದೃಷ್ಟಿಯಿಂದ ರಾಜ್ಯ ಸರ್ಕಾರ, ತಾಲೂಕು ಮಟ್ಟದಿಂದ ಹಿಡಿದು ರಾಜ್ಯಮಟ್ಟದ ವರೆಗಿನ ಅಧಿಕಾರಿಗಳಿಗೆ ಖಾಯಂ ಮೊಬೈಲ್ ನಂಬರ್ ಒದಗಿಸಿದೆ. ಆದರೆ, ಅದರ ಬಳಕೆಗೆ ಸರ್ಕಾರಿ ಅಧಿಕಾರಿಗಳು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.ರಾಜ್ಯದ ಎಲ್ಲಾ ಇಲಾಖೆಗಳಿಗೆ ಸಿಯುಜಿ ಕ್ಲೋಸ್ ಯುಸರ್ ಗ್ರುಪ್ ನಂಬರ್ ಗಳನ್ನು ಸರ್ಕಾರ ಎಲ್ಲ ಸ್ಥರದ ಅಧಿಕಾರಿಗಳಿಗೆ ಒದಗಿಸಿ ಕೋಟ್ಯಾಂತರ ರೂಪಾಯಿ ಮೊಬೈಲ್ ಬಿಲ್ ಸಂದಾಯ ಮಾಡುತ್ತದೆ. ಆದರೆ ಅವುಗಳ ಬಳಕೆ ಮಾತ್ರ ಪ್ರಶ್ನಾರ್ಹವಾಗಿಯೇ ಉಳಿದಿದೆ. ಸಾರ್ವಜನಿಕರಿಗೆ ಪ್ರತಿನಿತ್ಯ ಜೀವನದಲ್ಲಿ ಮೂಲಭೂತ ಸೌಕರ್ಯಗಳ ತೊಂದರೆಗಳು ಎದುರಾದಾಗ ಸಂಪರ್ಕಿಸಲು ಬೇಕಾಗಿದ್ದ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸರ್ಕಾರಿ ನಂಬರ್ 9483531835 ಸಾರ್ವಜನಿಕರಿಗೆ ಸದಾ ಅಲಭ್ಯವಾಗಿರುತ್ತದೆ. ಲಭ್ಯವಾಗಿದ್ದರೂ, ಅದನ್ನು ಸ್ವೀಕರಿಸುವುದು ಮಾತ್ರ ಅವರ ಆಪ್ತ ಕಾರ್ಯದರ್ಶಿಗಳು. ಇದೊಂದೆಡೆಯಾದರೇ, ಅತ್ಯವಶ್ಯಕವಾದ ಪೊಲೀಸ್ ಆಯುಕ್ತ 9480802001 ಈ ನಂಬರ್ ಎಂದೂ ಸ್ವೀಕರಿಸಲಾಗುವುದಿಲ್ಲ. ಈ ನಂಬರಿಗೆ ಕಳಿಸಿದ ಮೆಸೇಜ್ ಕೂಡ ಯಾವುದೇ ಸ್ಪಂದನೆಯಿಲ್ಲದೇ ಸತ್ತು ಹೋಗುತ್ತಿವೆ. ಮೇಲಾಧಿಕಾರಿಗಳ ಪರಿಸ್ಥಿತಿಯೇ ಇದಾಗಿದ್ದರೇ ಇವರ ಕೈ ಕೆಳಗಿನ ಅಧಿಕಾರಿಗಳು ಕೂಡ ತನ್ನ ಮೇಲಾಧಿಕಾರಿಗಳಂತೆ ವೈಯಕ್ತಿಕ ನಂಬರ್ ಮೇಲೆಯೇ ತನಗೆ ಬೇಕಾದವರೊಂದಿಗೆ ಆಡಳಿತ ನಡೆಸುತ್ತಿರುವುದು ವಿಪರ್ಯಾಸ. ಈ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಗುರುನಾಥ ಉಳ್ಳಿಕಾಶಿ ಸಾರ್ವಜನಿಕ ಹೋರಾಟಗಾರರು ಒಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಆಲಿಸಲು ಸರ್ಕಾರ ಅಧಿಕಾರಿಗಳಿಗೆ ಸಿಯುಜಿ ನಂಬರ್ ನೀಡಿದ್ದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜನರ ಹಿತ ಕಾಯಲು ಬಂದಿರುವ ಅಧಿಕಾರಿಗಳು ಸರ್ಕಾರದ ಉದ್ದೇಶ ನಿರ್ಲಕ್ಷಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

