ಚಿಕ್ಕೋಡಿ: ಗ್ರಾಮಸ್ಥರಿಗೆ ಮಾಹಿತಿ ನೀಡದೆ ಗ್ರಾಮ ಸಭೆ ನಡೆಸಲು ಮುಂದಾಗಿದ್ದ ಪಿಡಿಓ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಘಟನೆ ಜರುಗಿದೆ.ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ ನೋಡಲ್ ಅಧಿಕಾರಿ ವಿರುದ್ದವು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮ ಸಭೆ ಮುಂದುಡುವಂತೆ ಗ್ರಾಮಸ್ಥರ ಪಟ್ಟು ಹಿಡಿದರು. ಅಲ್ಲದೇ ಗ್ರಾಮ ಪಂಚಾಯತಿ ಸದಸ್ಯರಿಗೂ ಮಾಹಿತಿ ನೀಡಲ್ಲ ಎಂದು ಗ್ರಾಮದ ಸದಸ್ಯರು ಆರೋಪಿಸಿದರು.ಸ್ಥಳಕ್ಕೆ ಸಂಕೇಶ್ವರ ಪೋಲಿಸರು ಭೇಟಿ ಗ್ರಾಮಸ್ಥರನ್ನು ಸಮಾಧಾನ ಪಡೆಸಲು ಯತ್ನಿಸಿದರು.ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





