ಹುಬ್ಬಳ್ಳಿ: ಪೊಲೀಸ್ ಠಾಣೆಯಲ್ಲಿ ದೊಡ್ಡ ಅವಘಡ ತಪ್ಪಿದಂತಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡುತ್ತಿರುವಾಗಲೇ ಮೇಲ್ಚಾವಣಿಯಿಂದ ಶಿಥಿಲಗೊಂಡಿದ್ದ ಕಾಂಕ್ರೀಟ್ ಕುಸಿದು ಬಿದ್ದಿರುವ ಘಟನೆ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಯಲ್ಲಿ ನಡೆದಿದೆ. ಸಂಪೂರ್ಣವಾಗಿ ಶಿಥಿಲವಾಗಿರುವ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿದಂತಾಗಿದೆ. ಇನ್ನೂ ಸಮಾಜವನ್ನು ಕಾಯುವ ಪೊಲೀಸರಿಗಿಲ್ಲ ರಕ್ಷಣೆ ಎಂಬುವಂತಾಗಿದ್ದು, ಗೃಹ ಸಚಿವರೇ ಹೇಗಿವೆ ಪೊಲೀಸ್ ಠಾಣೆ ಗಳು ಒಮ್ಮೆ ನೋಡಿ ಹೇಗೆ ಕರ್ತವ್ಯ ಮಾಡಬೇಕು ಒಮ್ಮೆ ನೋಡಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

