ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ಭಾರಿ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಭೇದಿಸಿರುವ ಡಿಆರ್‌ಐ ಅಧಿಕಾರಿಗಳು, ಬಿಜೆಪಿ ಮುಖಂಡ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೇಣದಲ್ಲಿ ಮಿಶ್ರಣ ಮಾಡಿದ್ದ ಚಿನ್ನದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು ₹5 ಕೋಟಿ ಎಂದು ಅಂದಾಜಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ವಿಮಾನ ನಿಲ್ದಾಣದ ಸಮೀಪದ ಹೋಟೆಲ್ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು, ಚಿನ್ನ ಸಾಗಾಟದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ವಿಮಾನ ನಿಲ್ದಾಣ ಸೇವಾ ಸಂಸ್ಥೆಯ ಮೂವರು ಸಿಬ್ಬಂದಿ, ಇಬ್ಬರು ವಿದೇಶಿ ಪ್ರಜೆಗಳು ಹಾಗೂ ಬಿಜೆಪಿ ಮುಖಂಡ ಅಜಿತ್ ಅಚರೇಕರ್ ಸೇರಿದ್ದಾರೆ. ವಿಚಾರಣೆ ವೇಳೆ ಕಪ್ಪು ಕಾಲುಚೀಲದಲ್ಲಿ ಅಡಗಿಸಿಟ್ಟಿದ್ದ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಮೇಣದೊಂದಿಗೆ ಮಿಶ್ರಣ ಮಾಡಿದ್ದ ಚಿನ್ನದ ಪುಡಿ ಪತ್ತೆಯಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

