Breaking News

ಬೆಳಗಾವಿಯಲ್ಲಿ ‌ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ….

ಡಾ. ಬಿ ಆರ್ ಅಂಬೇಡ್ಕರ್ 134ನೇ ಜಯಂತಿಯ ಶುಭಾಶಯ ಕೋರಿದ ಹೆಬ್ಬಾಳ್ಕರ್,
ಭಾರತದ ಸಂವಿಧಾನ ವಿಶ್ವದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ.ಅಂಬೇಡ್ಕರ್ ಜಯಂತಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡೋಣ ಎಂದರು. ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಪ್ರಕರಣ ಬಗ್ಗೆ ಮಾತನಾಡಿದರು. ಪಿಎಸ್ಐ ಅನ್ನಪೂರ್ಣ ಕಾರ್ಯಕ್ಕೆ ನಾನು ಶ್ಲಾಘನೆಗೆ ವ್ಯಕ್ತ ಪಡಿಸುತ್ತೇನೆ.
ನಾನು ಸಚಿವೆಯಾಗಿ ಅಭಿನಂದನೆ ಸಲ್ಲಿಸುತ್ತೇನೆ
ಅನ್ನಪೂರ್ಣ ಗೆ ಅತ್ಯುನ್ನತ ಪದಕ ಸಿಗಬೇಕು ಎಂದು ಸಿಎಂ, ಗೃಹ ಸಚಿವರನ್ನು ಭೇಟಿಯಾಗುತ್ತೇನೆ.ಬೇರೆ ಅಧಿಕಾರಿಗಳಿಗೆ ಇದು ದಾರಿ ದೀಪವಾಗಬೇಕು.ಇಂತಹ ಪಿಡುಗು ನಮ್ಮ ಸಮಾಜದಿಂದ ನಿರ್ಮೂಲನೆ ಆಗಬೇಕು.
ನಮ್ಮ ಇಲಾಖೆಯಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಕೊಡುತ್ತೇನೆ.ಸರ್ಕಾರಿ ನೌಕರರಿಗೆ ಕೊಡಬೇಕು ಬಂದರೇ ಮೊದಲು ಹೆಸರು ಪಿಎಸ್ಐ ಅವರದ್ದು ಆಗಿರುತ್ತದೆ. ಇನ್ನು ಜಾತಿಗಣತಿ ಬಗ್ಗೆ ಮಾತನಾಡಿದ ಇವರು,ಜಾತಿ ಗಣತಿಗೆ ಯಾವತ್ತು ವಿರೋಧ ಇಲ್ಲ. ವೀರಶೈವ- ಲಿಂಗಾಯತರನ್ನು ಪ್ರತ್ಯೇಕ ಮಾಡಿ ಗಣತಿ ಮಾಡಲಾಗಿದೆ.ಜಾತಿ ಗಣತಿಯನ್ನು ಇನ್ನೊಮ್ಮೆ ಒಟ್ಟಾಗಿ ಮಾಡಬೇಕು.ಏಲ್ಲಾ ಜಾತಿಯಲ್ಲಿ ಜನರು ಹೆಚ್ಚಾಗಿ ಇರ್ತಾರೆ.ಅದರಂತೆ ನಮ್ಮ ವೀರಶೈವ, ಲಿಂಗಾಯತರಲ್ಲಿಯೂ ಜನ ಹೆಚ್ಚಾಗಿದ್ದಾರೆ.
ವೀರಶೈವ- ಲಿಂಗಾಯತ ಒಡೆದು ಹೋಗಿದು ಅಂಕಿ ಅಂಶ ಕಡಿಮೆ ಕಾಣಿಸುತ್ತಿದೆ ಎಂದರು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *