Breaking News

ನಲ್ಲೂರು | ಅಡಿಕೆ ತೋಟದ ಮಧ್ಯೆ ಕೋಳಿ ಅಂಕ: ಪೊಲೀಸರ ದಾಳಿ

ಕಾರ್ಕಳ: ಮನೆಯ ಸಮೀಪದ ಅಡಿಕೆ ತೋಟದ ಮಧ್ಯೆ ಶಾಮಿಯಾನ ಹಾಕಿ ಕುರ್ಚಿ, ಟೇಬಲ್‌ ಇರಿಸಿ ಸಾರ್ವಜನಿಕರನ್ನೂ ಸೇರಿಸಿ ಕೋಳಿಗಳ ಕಾಲುಗಳಿಗೆ ಬಾಳುಕತ್ತಿ ಕಟ್ಟಿ, ಹಣ ಪಣವಾಗಿ ಇಟ್ಟು ನಲ್ಲೂರು ಗ್ರಾಮದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿದ್ದಾರೆ.ಗ್ರಾಮದ ಬಂಗರೋಡಿ ಎಂಬಲ್ಲಿ ಉದಯ ಶೆಟ್ಟಿ ಕೋಳಿ ಅಂಕ ನಡೆಸುತ್ತಿದ್ದರು. ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುಂದರ, ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಶಿರ್ವದ ರವಿ, ಸತೀಶ್, ಸ್ಟೀಫನ್, ಕೊಂಡಮಲ ಗ್ರಾಮದ ಅಡಿಗಪ್ಪ, ಅಪ್ಪು ಸಂಪ್ಯ ನಗರ ಉದ್ಯಾವರ, ಸಂದೀಪ್ ಉದ್ಯಾವರ ಅವರನ್ನು ಬಂಧಿಸಿ 4 ಕೋಳಿ, ₹2.5 ಲಕ್ಷ ಮೌಲ್ಯದ ಕಾರು, ₹3 ಸಾವಿರ ನಗದು, ಇತರ ಸಲಕರಣೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *