ಗುಲ್ಶನ್ ಮತ್ತು ಮಹಿಳೆ ಇಬ್ಬರೂ ತಮ್ಮ ಹಳೆಯ ಸಂಬಂಧದಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಈ ನಡುವೆ 2019 ರಲ್ಲಿ ಗುಲ್ಶನ್ ಮೊಬೈಲ್ ಅಂಗಡಿಗೆ ಮಹಿಳೆ ಆಗಾಗ್ಗೆ ಭೇಟಿ ನೀಡುವುದರೊಂದಿಗೆ ಈ ಜೋಡಿಯ ಪ್ರೇಮಕಥೆ ಪ್ರಾರಂಭವಾಯಿತು. ಗುಲ್ಶನ್ ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಇತ್ತ ಮಹಿಳೆ ಕೂಡ ತನ್ನ ಪತಿಯಿಂದ ವಿಚ್ಛೇದನ ಪ್ರಕ್ರಿಯೆಗೆ ಒಳಗಾಗಿದ್ದಳು.ಗುಲ್ಶನ್‌ಗೆ ಯುವತಿ ತಾನು ಈ ಹಿಂದೆ ನೀಡಿದ್ದ 21.5 ಲಕ್ಷವನ್ನು ಹಿಂದಿರುಗಿಸುವ ನೆಪದಲ್ಲಿ ತನ್ನ ಮನೆಗೆ ಕರೆದಿದ್ದಾಳೆ. ಅಂತೆಯೇ ಅವನು ಬಂದ ಕೂಡಲೇ ತನ್ನ ಕುಟುಂಬ ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾಳೆ. ಆದರೆ ಗುಲ್ಶನ್ ಮನೆಗೆ ಬಂದ ಬಳಿಕ ಯುವತಿ ತನ್ನನ್ನು ಮದುವೆಯಾಗುವಂತೆ ಪೀಡಿಸಿದ್ದಾಳೆ. ಇದನ್ನು ಆತ ನಿರಾಕರಿಸಿದ್ದು, ಸಿಟ್ಟಿಗೆದ್ದು ಗುಲ್ಶನ್ ಮೇಲೆ ಹಲ್ಲೆ ಮಾಡಿದ್ದಾಳೆ. ಹಲ್ಲೆಯಿಂದಾಗಿ ಯುವಕನ ಎರಡೂ ಕೈಗಳು ಮತ್ತು ಕಾಲುಗಳಿಗೆ ಪ್ಲಾಸ್ಟರ್ ಹಾಕಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

