Breaking News

ಧಾರ್ಮಿಕ ಹಾಡನ್ನು ಹಾಕಿದ್ದಕ್ಕೆ ಪಾಕ್ ಮೂಲದ ವ್ಯಕ್ತಿಯೋರ್ವ ಭಾರತ ಮೂಲದ ಮೂವರ ಮೇಲೆ ಭೀಕರ ದಾಳಿ!!

ಭಾರತದ ತೆಲಂಗಾಣ ಮೂಲದ ನಿರ್ಮಲ್ ಜಿಲ್ಲೆಯ ಸೋನ್ ಗ್ರಾಮದ ಅಷ್ಟಪು ಪ್ರೇಮಸಾಗರ್ (35), ಶ್ರೀನಿವಾಸ್ ಎಂಬುವವರು ಕಳೆದ ಐದಾರು ವರ್ಷಗಳಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬೇಕರಿಯಲ್ಲಿ ಧಾರ್ಮಿಕ ಹಾಡನ್ನು ಹಾಕಿದ್ದರು. ಈ ವೇಳೆ ಬೇಕರಿಗೆ ಆಗಮಿಸಿದ ಪಾಕ್ ಮೂಲದ ಪ್ರಜೆಯೋರ್ವ ಏಕಾಏಕಿ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಪ್ರೇಮ್ ಸಾಗರ ಹಾಗೂ ಶ್ರೀನಿವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಾಗರ್ ಎಂಬಾತ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಸದ್ಯ ಇಬ್ಬರ ಯುವಕರ ಮೃತದೇಹವನ್ನು ಭಾರತಕ್ಕೆ ಮರಳಿ ತರಲು ಸಹಾಯ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದು, ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಬಳಿ ಮಾತನಾಡಲಾಗಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ತಿಳಿಸಿದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *