ರಾಜ್ಯದ 3 ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತನ್ನದೇ ಆದ ರೀತಿಯಲ್ಲಿ ತಂತ್ರ ರಣತಂತ್ರಗಳನ್ನು ರೂಪಿಸಿದ್ದಾಗಿದೆ. ನಾಯಕರ ಕ್ಯಾಂಪೇನ್ ಕೂಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ವಿಜಯದ ಮಾಲೆ ತೊಡಿಸಲೇಬೇಕೆಂದು ಪಣತೊಟ್ಟಿರೋ ಉಸ್ತುವಾರಿಗಳು ಆಯಾ ಕ್ಷೇತ್ರಗಳಲ್ಲೇ ಬಿಡುಬಿಟ್ಟು, ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಆದ್ರೆ, ಕೈ ಪಾಳಯದಲ್ಲಿ ಏಕೋ ಪ್ರಚಾರದ ಭರಾಟೆಯೇ ಕಾಣಿಸುತ್ತಿಲ್ಲ.ಒಂದು ಕಡೆ ಬಳ್ಳಾರಿ ಲೋಕಸಭಾ ಕ್ಷೇತ್ರ, ಮತ್ತೊಂದೆಡೆ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ರೂ, ಪ್ರಚಾರದ ಅಬ್ಬರ ಆರಂಭವಾಗಿಯೇ ಇಲ್ಲ. ಈಗಾಗಲೇ ಬಳ್ಳಾರಿ ಎಂಪಿ ಕ್ಷೇತ್ರದ ಉಪಚುನಾವಣಾ ಉಸ್ತುವಾರಿಯನ್ನು ಸಚಿವ ಡಿ.ಕೆ. ಶಿವಕುಮಾರ್ ಹೆಗಲಿಗೆ ಹಾಕಲಾಗಿದೆ. ಡಿಸಿಎಂ ಡಾ.ಜಿ.ಪರಮೇಶ್ವರ್ಗೆ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಲಾಗಿದೆ. ಆದ್ರೆ ಜಮಖಂಡಿ ವಿಧಾನಸಭೆ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಈವರೆಗೂ ಉಸ್ತುವಾರಿಗಳು ವಾಸ್ತವ್ಯ ಹೂಡಿ ಪ್ರಚಾರದ ಅಖಾಡಕ್ಕೆ ಧುಮುಕಿಲ್ಲಪ್ರಚಾರದ ಅಖಾಡದಿಂದ ‘ಕೈ’ ನಾಯಕರು ದೂರ.?ಈಗಾಗಲೇ ಬೈ ಎಲೆಕ್ಷನ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಉಮೇದುವಾರಿಕೆ ಸಲ್ಲಿಸಿದವರು ಈಗಾಗಲೇ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿ ನಾಯಕರು ಕ್ಷೇತ್ರಗಳಲ್ಲಿ ಬೀಡುಬಿಟ್ಟು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ, ಕಾಂಗ್ರೆಸ್ ನಾಯಕರು ದಸರಾ ಹಬ್ಬದ ನೆಪವೊಡ್ಡಿ ಪ್ರಚಾರದ ಅಖಾಡದಿಂದ ದೂರವಿದ್ದಾರೆ. ಇದು ಜಮಖಂಡಿ, ಬಳ್ಳಾರಿಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯನ್ನು ತಂದೊಡ್ಡುವ ಸಾಧ್ಯತೆಯಿದೆ ಎನ್ನಲಾಗಿದೆ.ಸಾಲು ಸಾಲು ರಜೆ ಇದ್ರೂ ಒಂದು ಸುತ್ತಿನ ಪ್ರಚಾರ ಕಾರ್ಯವನ್ನಾದರೂ ಮುಗಿಸಬೇಕಿದ್ದ ಕಾಂಗ್ರೆಸ್, ಏಕೆ ಪ್ರಚಾರದಲ್ಲಿ ಹಿಂದೆ ಬಿದ್ದಿದೆ ಎಂಬ ಮಾತುಗಳು ಚರ್ಚೆಯಾಗುತ್ತಿವೆ. ಇತ್ತ ಬಳ್ಳಾರಿ ಎಂಪಿ ಕ್ಷೇತ್ರದ ವ್ಯಾಪ್ತಿಗೆ ಬರುವ 9 ವಿಧಾನಸಭಾ ಕ್ಷೇತ್ರಗಳಿಗೂ 9 ಮಂದಿ ಸಚಿವರು, ಕೈ ನಾಯಕರನ್ನು ನೇಮಕ ಮಾಡಿದ್ದು, ಈವರೆಗೂ ಪ್ರಚಾರ ಆರಂಭವಾಗಿಲ್ಲ. ಇದು ಅಭ್ಯರ್ಥಿಗಳ ಆತಂಕಕ್ಕೂ ಕಾರಣವಾಗಿದೆ. ಇತ್ತ ಬಿಜೆಪಿ 3 ಲೋಕಸಭಾ, 2 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಕೂಡ ಆರಂಭಿಸಿದೆ. ಒಂದು ಕಡೆ ಉಸ್ತುವಾರಿಗಳು ಮತಯಾಚನೆಯಲ್ಲಿ ಬ್ಯುಸಿಯಾದ್ರೆ, ಇನ್ನೊಂದೆಡೆ ಅಭ್ಯರ್ಥಿಗಳು ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.ಕೈ’ನಿಂದ ಕ್ಯಾಂಪೇನ್ ಆರಂಭ ಯಾವಾಗ..ಇನ್ನು, ಕಾಂಗ್ರೆಸ್ ತಾನು ಸ್ಪರ್ಧೆಗಿಳಿದಿರುವ ಬಳ್ಳಾರಿ ಲೋಕಸಭಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ದಸರಾ ಹಬ್ಬದ ಬಳಿಕ ಪ್ರಚಾರದ ಆಖಾಡಕ್ಕೆ ಧುಮುಕೋ ಸಾಧ್ಯತೆಯಿದೆ. ಅಕ್ಟೋಬರ್ 20 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಕಾರಣ, ಅಕ್ಟೋಬರ್ 20ರ ಬಳಿಕ ಉಸ್ತುವಾರಿಗಳು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆನ್ನಲಾಗುತ್ತಿದೆ. ಒಟ್ನಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಪ್ರಚಾರದ ಆಖಾಡದಿಂದ ದೂರ ಉಳಿದಿದ್ದು, ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಯಾವಾಗ ಉಸ್ತುವಾರಿಗಳು ಕ್ಷೇತ್ರಕ್ಕೆ ಭೇಟಿ ಕೊಟ್ಟು ಪ್ರಚಾರ ಆರಂಭಿಸುತ್ತಾರೋ ಕಾದು ನೋಡಬೇಕು
bigtvnews | Hubli Dharwad News | Kannada News | Karnataka News Hubli News | News In Hubli | Local news





