Breaking News
Oplus_131072

ಮದ್ವೆಯಾಗಿದ್ದ ಆಂಟಿ ಜತೆ ಲವ್ವಿಡವ್ವಿ: ಕರೆ ಸ್ವೀಕರಿಸಲಿಲ್ಲ ಎಂದು ಮನೆಗೆ ಹೋದ ಯುವಕ ಆಸ್ಪತ್ರೆ ಸೇರಿದ!!!

ಮದುವೆಯಾಗಿದ್ದ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ. ಗೋಕಾಕ್​ನ ಸಂಗಮೇಶ್ವರದ ನಿವಾಸಿ ಆನಂದ್​, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆನಂದ್, ಗೋಕಾಕ್​ನ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದು, ಬಳಿಕ ಆಕೆ ಫೋನ್ ಕರೆ ಸ್ವೀಕರಿಸಿಲ್ಲವೆಂದು ಮನೆಗೆ ಬಂದಿದ್ದಾನೆ. ಆಗ ವೇಳೆ ಮಾತಿನ ಚಕಮಕಿಯಾಗಿ ಆಂಟಿಯೇ ಯುವಕನಿಗೆ ಚಾಕುವಿನಿಂದ ಇರಿದ್ದಿದ್ದಾಳೆ. ಇದರಿಂದ ಗಾಯಗೊಂಡಿರುವ ಯುವಕ ಆನಂದ್ ಬೆಳಗಾವಿಯ ಬಿಮ್ಸ್​ನಲ್ಲಿ ಚಿಕಿತ್ಸೆ. ಆನಂದ್, ಶೋಭಾ ಇಬ್ಬರಿಗೂ ಗಾಯವಾಗಿದ್ದು, ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಗೋಕಾಕ್ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ. ಏನೇಹೇಳಿ, ಮದುವೆಯಾಗಿ ನೆಮ್ಮದಿಯಿಂದ ಇರಬೇಕಿದ್ದ ಮಹಿಳೆ ಈಗ ಯುವಕನ ನೆಮ್ಮದಿಯನ್ನೂ ಕಸಿದು ಆಸ್ಪತ್ರೆ ಸೇರುವಂತೆ ಮಾಡಿದ್ದಾಳೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *