ಬೆಂಗಳೂರು: ವಸತಿ ಕಟ್ಟಡವೊಂದರ ಖಾತಾ ಬದಲಾವಣೆ ಮಾಡಿಕೊಡಲು ₹3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಯ ತಣಿಸಂದ್ರ ವಾರ್ಡ್‌ನ ಕಂದಾಯ ನಿರೀಕ್ಷಕ (ಆರ್‌ಐ) ವೆಂಕಟೇಶ್ ಮತ್ತು ತೆರಿಗೆ ನಿರೀಕ್ಷಕ (ಟಿಐ) ಶ್ರೀನಿವಾಸ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹೆಗ್ಗಡೆ ನಗರ ನಿವಾಸಿ ನಯಾಮತ್ ಉಲ್ಲಾ ಖಾನ್ ಅವರು ತಣಿಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ಹೊಂದಿದ್ದಾರೆ. ಆ ಕಟ್ಟಡದ ಖಾತಾ ಬದಲಾವಣೆಗೆ ಅವರು ಅರ್ಜಿ ಸಲ್ಲಿಸಿದ್ದರು. ಆ ಕೆಲಸ ಮಾಡಿಕೊಡಲು ವೆಂಕಟೇಶ್ ಮತ್ತು ಶ್ರೀನಿವಾಸ ಅವರು ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ನಯಾಮತ್ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸ್‌ರಿಗೆ ದೂರು ನೀಡಿದ್ದರು. ಎಸ್‌ಪಿ ಕೋನ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಪೂವಯ್ಯ.ಕೆ ಅವರ ತಂಡವು ಕಾರ್ಯಾಚರಣೆ ರೂಪಿಸಿತ್ತು. ಅದರಂತೆ ನಯಾಮತ್ ಅವರು ಆರೋಪಿಗಳ ಕಚೇರಿಗೆ ತೆರಳಿ, ಹಣ ನೀಡಿದ್ದರು. ಆಗ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಬಂಧಿಸಲಾಯಿತು. ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

