ಬೆಂಗಳೂರು: ಜ್ಯೂಸ್ ಕುಡಿಯಲು ಸ್ನೇಹಿತರೊಂದಿಗೆ ಹೋಗಿದ್ದ 17 ವರ್ಷದ ವಿದ್ಯಾರ್ಥಿಗೆ ಮೂವರು ಅಪರಿಚಿತರು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಆರ್.ಆರ್. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೇ 27ರ ರಾತ್ರಿ ಪಟ್ಟಣಗೆರೆಯ ಪಲ್ಲವಿ ಢಾಬಾ ಬಳಿ ಘಟನೆ ನಡೆದಿದ್ದು, ದಾರಿ ಬಿಡುವ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಬಳಿಕ ಆರೋಪಿಗಳು ವಿದ್ಯಾರ್ಥಿಯ ಬೈಕ್ ಕಸಿದು ಪರಾರಿಯಾಗಿದ್ದರು. ಬಳಿಕ ವಿದ್ಯಾರ್ಥಿ ಸ್ನೇಹಿತರ ಜೊತೆ ಆರೋಪಿಗಳನ್ನು ಹಿಂಬಾಲಿಸಿದ್ದ ವೇಳೆ ಮತ್ತೆ ಜಗಳ ನಡೆದಿದೆ. ಅನಂತರ ಪಟ್ಟಣಗೆರೆ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಅಡ್ಡಗಟ್ಟಿದ ಆರೋಪಿಗಳು ಎದೆ, ಬೆನ್ನು, ತಲೆ ಹಾಗೂ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

