ಹಾಸನದಿಂದ ರಾಯರ ದರುಶನಕ್ಕೆ ತೆರಳಿದ್ದ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡ 16 ವರ್ಷದ ಬಾಲಕಿ ತೇಜಸ್ವಿನಿ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಬೇಲೂರಿನ ಶೆಟ್ಟಿಗೆರೆ ಗ್ರಾಮದ ನಿವಾಸಿ. ಅಪಘಾತದಲ್ಲಿ ತೇಜಸ್ವಿನಿಯ ತಾಯಿ ಲೋಲಾಕ್ಷಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ತೇಜಸ್ವಿನಿಯ ಸಾವಿನಿಂದಾಗಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ರಾಘವೇಂದ್ರನ ದರುಶನಕ್ಕೆ ಹೊರಟಿದ್ದ ಬೊಲೇರೋ ವಾಹನ ಸಿಮೆಂಟ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಸ್ಥಳದಲ್ಲಿಯೇ ಆರು ಮಂದಿ ಮೃತಪಟ್ಟಿದ್ದರು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

