ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಕೃಷ್ಣ ಮತ್ತು ವೆನ್ನಾ ನದಿಯ ಸಂಗಮದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರೀಕರಣದಲ್ಲಿ ಡ್ಯಾನ್ಸರ್ ಸೌರಭ್ ಶರ್ಮಾ ಕೂಡ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಕೃಷ್ಣ ನದಿ ಬಳಿ ತೆರಳಿದ ಸೌರಭ್ ಅವರು ಕೊಚ್ಚಿಕೊಂಡು ಹೋದರು. 2 ದಿನಗಳ ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ.ದಿನಗಳ ಕಳೆದ ಬಳಿಕ ಅವರ ಶವ ಪತ್ತೆ ಆಗಿದೆ. ಈ ಅವಘಡ ಸಂಭವಿಸಿದ ಬಳಿಕ ‘ರಾಜಾ ಶಿವಾಜಿ’ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದೆ.ಅಪಘಾತದಿಂದ ಸೌರಭ್ ಶರ್ಮಾ ಸಾವು ಸಂಭವಿಸಿದೆ ಎಂದು ಸತಾರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಈ ದುರ್ಘಟನೆ ನಡೆದಿದ್ದರಿಂದ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ರಿತೇಶ್ ದೇಶಮುಖ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಒಡೆತನದ ‘ಮುಂಬೈ ಫಿಲ್ಮ್ ಕಂಪನಿ’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

