Breaking News

ವಿಧಾನಸೌಧದ ಆವರಣದಲ್ಲೇ ಭದ್ರತಾ ಲೋಪ ಘಟನೆ

ಬೆಂಗಳೂರು: ವಿಧಾನಸೌಧ ಮುಂದೆಯೇ ಭದ್ರತಾ ವೈಫಲ್ಯ ನಡೆದಿರುವ ಘಟನೆ ಇಂದು ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಭದ್ರತಾ ಲೋಪ ಎದುರಾಗಿದ್ದು, ಏಕಾಏಕಿ ಯುವಕನೋರ್ವ ಸಿಎಂ ಬಳಿ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.
ಸಚಿವ ಮಹದೇವಪ್ಪ ಮಾತನಾಡುತ್ತಿದ್ದ ವೇಳೆ ಯುವನೋರ್ವ ಏಕಾಏಕಿ ವೇದಿಕೆ ಮುಂಭಾಗದಿಂದ ಹಾರಿ ವೇದಿಕೆಗೆ ಬಂದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದುಕೊಂಡು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
ಇವತ್ತು ವಿಧಾನಸೌಧದ ಎದುರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಏಕಾಏಕಿ ಯುವ ಜಂಪ್‌ ಮಾಡಿ ವೇದಿಕೆಗೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿ ವೇದಿಕೆ ಮೇಲಿದ್ದ ಗಣ್ಯರು ತಬ್ಬಿಬ್ಬಾಗಿದ್ದರು. ಕೂಡಲೇ ಸಿಎಂ ಅಂಗರಕ್ಷಕರು ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಯುವಕನನ್ನು ವಶಕ್ಕೆ ಪಡೆದರೂ ಆತನ ಸಿಎಂ ಕಡೆಗೆ ಶಾಲು ಎಸೆದು ಅಲ್ಲಿಂದ ಹೋಗಿದ್ದಾನೆ. ವಿಧಾನಸೌಧದ ಆವರಣದಲ್ಲೇ ಘಟನೆ ನಡೆದಿದ್ದು, ಸಿಎಂ ಕಾರ್ಯಕ್ರಮದಲ್ಲೇ ಭದ್ರತಾ ಲೋಪ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *