ಬಾಡಿಗೆ ಮನೆಯಲ್ಲಿ ವಾಸವಿದ್ದ 19 ವರ್ಷದ ಯುವಕ ಚಂದು ಎಂಬುವವನು, 8 ವರ್ಷದ ಬಾಲಕಿಗೆ ತನ್ನ ಖಾಸಗಿ ಅಂಗ ತೋರಿಸಿ ಮುಟ್ಟುವಂತೆ ಹೇಳಿದ ಎಂಬ ಆರೋಪದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಕ್ಷಣವೇ ತಾಯಿಗೆ ಬಾಲಕಿ ತಿಳಿಸಿದ್ದಳು. ಅಮ್ಮಾ, ಚಂದು ಅಣ್ಣ ನನ್ನನ್ನು ರೂಮಿನ ಹತ್ತಿರ ಕರೆದು ಪ್ಯಾಂಟ್ ಬಿಚ್ಚಿ ತೋರಿಸಿದ್ರು, ಅದನ್ನ ಮುಟ್ಟು ಅಂತ ಹೇಳಿದ್ರು,’ ಎಂದು ಬಾಲಕಿ ತನ್ನ ತಾಯಿಗೆ ಹೇಳಿದ್ರು ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

