Breaking News
Oplus_131072

ಮುಂಬೈ : ಬಸ್ ಡಿಕ್ಕಿ ಅಪಘಾತದಲ್ಲಿ ಎಡಗೈಯನ್ನೇ ಕಳೆದುಕೊಂಡ ಬೈಕ್‌ ಸವಾರ!!

ಇಸ್ಮಾಯಿಲ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಸ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅವನ ಎಡಗೈ ಚಕ್ರದ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿ ತುಂಡಾಗಿದೆ. ತಕ್ಷಣ ಆತನನ್ನು ಹೋಲಿ ಸ್ಪಿರಿಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಎಡಗೈ ತೀವ್ರವಾಗಿ ಹಾನಿಗೊಳಗಾದ ಕಾರಣ ಅದನ್ನು ಕತ್ತರಿಸಲಾಗಿದೆ.ಪೊಲೀಸರು ಬಸ್‍ ಅನ್ನು ವಶಪಡಿಸಿಕೊಂಡು ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದಾರೆ. ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ಎಂಐಡಿಸಿ ಪೊಲೀಸರು ವಿಖ್ರೋಲಿ ನಿವಾಸಿ ಬಸ್ ಚಾಲಕ ವಿಜಯ್ ಪಾಟೀಲ್ (33) ವಿರುದ್ಧ ರಾಶ್ ಡ್ರೈವಿಂಗ್ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸವಾರಿ ಮತ್ತು ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *